‘ಮಗ ಅತ್ಯಾಚಾರ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾನೆ: 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು’: ವಂಚನೆಯ ಕರೆಗೆ ಹಣ ಕಳೆದುಕೊಂಡ ವ್ಯಕ್ತಿ

ಸಾಂದರ್ಭಿಕ ಚಿತ್ರ

ಬೆಂಗಳೂರು: ‘ನಿಮ್ಮ ಮಗ ಅತ್ಯಾಚಾರ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾನೆ’ ಎಂದು ಪೊಲೀಸ್ ಅಧಿಕಾರಿಗಳಂತೆ ನಟಿಸಿ ಮಗನನ್ನು ಬಂಧಿಸಲಾಗಿದೆ ಎಂದು ಬೆದರಿಸಿ ಅಪರಿಚಿತ ವ್ಯಕ್ತಿಗಳು ವೃದ್ಧರೊಬ್ಬರಿಗೆ 20,000 ರೂ.ಗಳನ್ನು ವಂಚಿಸಿದ್ದಾರೆ.

ಅಕ್ಟೋಬರ್ 28 ರಂದು ಮತ್ತಿಕೆರೆ ನಿವಾಸಿಯೊಬ್ಬರಿಗೆ ಫೋನ್ ಕರೆ ಬಂದಿತ್ತು. ಕರೆ ಮಾಡಿದ ವಂಚಕ ತನ್ನನ್ನು ಪೊಲೀಸ್ ಎಂದು ಹೇಳಿಕೊಂಡು, ‘ನಿಮ್ಮ ಮಗನನ್ನು ಅತ್ಯಾಚಾರ ಪ್ರಕರಣದಲ್ಲಿ ಇತರ ಇಬ್ಬರೊಂದಿಗೆ ಬಂಧಿಸಲಾಗಿದ್ದು, 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು’ ಎಂದು ತಿಳಿಸಿದ್ದಾನೆ.

ಇದರಿಂದ ಗಾಬರಿಗೊಂಡ ವ್ಯಕ್ತಿ ಮುಂದಿನ ಕ್ರಮವೇನು ಎಂದು ಕೇಳಿದ್ದು, ಆಗ ವಂಚಕ ‘20,000 ರೂ.ಗಳನ್ನು ಪಾವತಿಸುವಂತೆ ಹೇಳಿದ್ದಾನೆ’. ಭಯದಿಂದ ವ್ಯಕ್ತಿ ಹಣ ಪಾವತಿಸಿದ್ದು, ಬಳಿಕ ತಮ್ಮ ಮಗನನ್ನು ಸಂಪರ್ಕಿಸಿದಾಗ ಮೋಸ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ.

error: Content is protected !!