ನಿಧಿಗಾಗಿ ಮಗುವನ್ನು ಬಲಿಕೊಡೋಣ ಎಂದು ಪತ್ನಿಗೆ ಕಿರುಕುಳ: ಆದಿಈಶ್ವರ್ ಹೆಸರಲ್ಲಿ ಹಿಂದೂ ಯುವತಿಯನ್ನು ವರಿಸಿದ್ದ ಸದ್ದಾಂ: ಕುಟ್ಟಿ ಸೈತಾನ್ ಪೂಜೆ: ಪತಿಯ ವರ್ತನೆಯಿಂದ ಭಯಭೀತಳಾಗದ ಮಹಿಳೆ

ಬೆಂಗಳೂರು: ನಿಧಿಗಾಗಿ ಮಗುವನ್ನು ಬಲಿಕೊಡೋಣ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಪತ್ನಿಯೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ನಾನೊಬ್ಬ ಹಿಂದೂ ಯುವಕ, ನನ್ನ ಹೆಸರು ಆದಿಈಶ್ವರ್ ಎಂದು ಸುಳ್ಳು ಹೇಳಿ ಸದ್ದಾಂ ಎಂಬಾತ ಹಿಂದು ಧರ್ಮದ ಯುವತಿಯನ್ನು ಮದುವೆಯಾಗಿದ್ದ. ಆದರೆ ಪತ್ನಿ ಗರ್ಭಿಣಿಯಾದಾಗ ತಾನೊಬ್ಬ ಮುಸಲ್ಮಾನ್ ತನ್ನ ಹೆಸರು ಸದ್ದಾಂ ಎಂದು ಸತ್ಯ ವಿಚಾರ ಹೇಳಿಕೊಂಡಿದ್ದ. ಅಲ್ಲದೆ ನೀನು ಮುಸಲ್ಮಾನ್ ಧರ್ಮಕ್ಕೆ ಮತಾಂತರವಾಗಬೇಕೆಂದು ಪತ್ನಿಯನ್ನು ಮತಾಂತರಿಸಿದ್ದ. ಪತ್ನಿಯ ಹೆಸರನ್ನು ಬದಲಾಯಿಸಿದ್ದ.

ಪ್ರೀತಿಸಿ ಮದುವೆಯಾದವನು ಧರ್ಮ ಯಾವುದಾದರೇನು ಎಂದು ಪತ್ನಿಯೂ ಸುಮ್ಮನಾಗಿದ್ದಳು. ಆದರೆ ಇತ್ತೀಚಿಗೆ ಸೈಕೋ ರೀತಿಯಲ್ಲಿ ಸದ್ದಾಂ ವರ್ತಿಸುತ್ತಿದ್ದು, ಗಂಡು ಮಗು ಹುಟ್ಟಿದ ನಂತರ ಕುಟ್ಟಿ ಸೈತಾನ್ ಪೂಜೆ ಮಾಡಬೇಕು. ಕುಟ್ಟಿ ಸೈತಾನ್ ಪೂಜೆಯಲ್ಲಿ ಮಗುವನ್ನು ಬಲಿ ಕೊಡಬೇಕು. ಮಗುವನ್ನು ಬಲಿ ಕೊಟ್ರೆ ಸಮೃದ್ಧಿ ಹೆಚ್ಚಾಗತ್ತೆ, ಜೊತೆಗೆ ನಿಧಿ ಸಿಗತ್ತೆ. ಮಗುವನ್ನು ಬಲಿ ಕೊಡೋಣ, ಮಗುವನ್ನು ಕೊಡು ಎಂದು ಟಾರ್ಚರ್ ಕೊಟ್ಟಿದ್ದಾನೆ.

ಸೈಕೋ ಗಂಡನಿಂದ ತಪ್ಪಿಸಿಕೊಂಡಿರುವ ಮಹಿಳೆ ತುಮಕೂರಿನ ತವರು ಮನೆ ಸೇರಿಕೊಂಡಿದ್ದಾಳೆ. ತುಮಕೂರಿಗೂ ತೆರಳಿ ಮಗುವನ್ನು ಬಲಿ ಕೊಡೋಣ ಮಗುವನ್ನು ಕೊಡು ಎಂದು ಕಿರುಕುಳ ಕೊಟ್ಟಿದ್ದಾನೆ. ಆರೋಪಿ ಸದ್ದಾಂ ಪತ್ನಿಯ ತಾಯಿಗೂ ಜೀವ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಸದ್ದಾಂ ಪತ್ನಿ ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದು, ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದೇ ಇದ್ದಾಗ, ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

error: Content is protected !!