ವರ್ಷದ 11ನೇ ಚಂಡಮಾರುತಕ್ಕೆ ತತ್ತರಿಸಿದ ಫಿಲಿಪ್ಪೀನ್ಸ್:ಪ್ರಕೃತಿ ಮುನಿಸಿಗೆ 130 ಮಂದಿ ಸಾವು: ಹಲವರು ನಾಪತ್ತೆ: 24 ಗಂಟೆಯಲ್ಲಿ ಸುರಿದ ಎರಡು ತಿಂಗಳ ಮಳೆ..!!


ಫಿಲಿಪ್ಪೀನ್ಸ್: ಈ ವರ್ಷದ 11ನೇ ಚಂಡಮಾರುತಕ್ಕೆ ಫಿಲಿಪ್ಪೀನ್ಸ್ ತತ್ತರಿಸಿದೆ. ಟ್ರಾಮಿ ಹೆಸರಿನ ಚಂಡಮಾರುತದಿAದ ಭಾರಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿ 130 ಜನರು ಸಾವನ್ನಪ್ಪಿದ್ದು ಹಲವರು ಕಾಣೆಯಾಗಿದ್ದಾರೆ.

ವಾಯುವ್ಯ ಫಿಲಿಪ್ಪೀನ್ಸ್ ನಿಂದ ಬೀಸಿದ ಚಂಡಮಾರುತದ ಪರಿಣಾಮ ಭಾರಿ ಮಳೆ ಸುರಿದು 24 ಗಂಟೆಯಲ್ಲಿ ಎರಡು ತಿಂಗಳಲ್ಲಿ ಆಗುವಷ್ಟು ಮಳೆಯಾಗಿದೆ. ಇದರಿಂದ ಭೀಕರ ಪ್ರವಾಹ ಸೃಷ್ಟಿಯಾಗಿ ಹಲವು ಪ್ರಾಂತ್ಯಗಳು ಮುಳುಗಡೆಯಾಗಿದ್ದು, 5 ಮಿಲಿಯನ್‌ಗಿಂತಲೂ ಹೆಚ್ಚು ಜನರು ಚಂಡಮಾರುತಕ್ಕೆ ತುತ್ತಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಇತರ ರಕ್ಷಣಾ ಪಡೆಗಳು ಸ್ನಿಫರ್ ಡಾಗ್‌ಗಳ  ಬೆಂಬಲದೊಂದಿಗೆ ಕಾಣೆಯಾದವರ ಪತ್ತೆ ಕಾರ್ಯ ನಡೆಸಲಾಗುತ್ತಿದೆ.

error: Content is protected !!