ಬೆಳ್ತಂಗಡಿ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ನಡೆಯಲಿರುವ ಮೂರನೇ ವಾರ್ಷಿಕೋತ್ಸವ “ಯಕ್ಷ ಸಂಭ್ರಮ” ಕಾರ್ಯಕ್ರಮವು ಗುರುವಾಯನಕೆರೆಯಲ್ಲಿ ನಡೆಯಲಿದ್ದು ಈ ಬಗ್ಗೆ ಪೂರ್ವಭಾವಿ ಸಭೆಯು ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿಯ ಲಯನ್ಸ್ ಭವನದಲ್ಲಿ ಆ 26 ರಂದು ನಡೆಯಿತು.
ಡಿಸೆಂಬರ್ 14 ಶನಿವಾರ ಗುರುವಾಯನಕೆರೆ “ನವಶಕ್ತಿ ಮೈದಾನದಲ್ಲಿ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ಪಟ್ಲ ಫೌಂಡೇಶನ್ ಮಹಾ ಪೋಷಕರಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ನೇತೃತ್ವದಲ್ಲಿ ವಿಶೇಷ ರೀತಿಯಲ್ಲಿ ನಡೆಯಲಿದ್ದು, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವಿವಿಧ ನೃತ್ಯ ಭಜನಾ ತಂಡಗಳೊಂದಿಗೆ ಗುರುವಾಯನಕೆರೆ ಪೇಟೆಯಿಂದ ಮೇಳದ ದೇವರ ಮೆರವಣಿಗೆಯು ಅಭೂತಪೂರ್ವವಾಗಿ ನಡೆಸುವ ಬಗ್ಗೆ ಹಾಗೂ ವಿಶೇಷ ಖಾದ್ಯಗಳ ಉಟೋಪಚಾರ,ಸತ್ಕಾರ ಸೇರಿದಂತೆ ಮಾದರಿ ಕಾರ್ಯಕ್ರಮ ಆಯೋಜಿಸುವ ಬಗ್ಗೆಯೂ ಚರ್ಚಿಸಲಾಯಿತು. ಸಭೆಯಲ್ಲಿ ಗೌರವ ಸಲಹೆಗಾರ ಭುಜಬಲಿ ಧರ್ಮಸ್ಥಳ, ಪುಷ್ಪರಾಜ್ ಶೆಟ್ಟಿ ಬೆಳ್ತಂಗಡಿ,ದಯಾನಂದ ಎಲಚ್ಚಿತ್ತಾಯ,ಮೋಹನ ಕೃಷ್ಣ ಪಂಜಿರ್ಪು, ಮುರಳಿ ಕೃಷ್ಣ ಆಚಾರ್ಯ, ವೆಂಕಟರಮಣ ಶೆಟ್ಟಿ ಉಜಿರೆ, ವಸಂತ ಶೆಟ್ಟಿ ಶ್ರದ್ಧಾ, ಪ್ರಸಾದ್ ಶೆಟ್ಟಿ ಎಣಿಂಜೆ,ದೇವಿಪ್ರಸಾದ್ ಗುರುವಾಯನಕೆರೆ, ಪ್ರಶಾಂತ್ ಕರಂಬಾರು,ದೇವರಾಜ್ ಸೇರಿದಂತೆ ಇತರರು ಸಭೆಯಲ್ಲಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಘಟಕದ ಕಾರ್ಯದರ್ಶಿ ಶಿತಿಕಂಠ ಭಟ್ ಸ್ವಾಗತಿಸಿ, ಕಿರಣ್ ಕುಮಾರ್ ಗುರುವಾಯನಕೆರೆ ಧನ್ಯವಾದವಿತ್ತರು.
ಜಾಹೀರಾತು