ಭುವನೇಶ್ವರ: ಡಾನಾ ಅಬ್ಬರಕ್ಕೆ ಒಡಿಶಾ ಕರಾವಳಿ ಭಾಗದ ಜನರು ತತ್ತರಿಸಿದ್ದಾರೆ.
ಗುರುವಾರ ರಾತ್ರಿ ತೀವ್ರ ಚಂಡಮಾರುತ ಉಂಟಾಗಿ, ಭಾರಿ ಗಾಳಿ ಸಹಿತ ಮಳೆ ಸುರಿದಿದ್ದು, ಭೂಕುಸಿತ ಪ್ರಕ್ರಿಯೆ ಆರಂಭಗೊAಡಿದೆ. ಹಲವಾರು ಮರಗಳು ನೆಲಕ್ಕುರುಳಿದ್ದು, ಇಂದು ಬೆಳಗಿನ ಜಾವದವರೆಗೂ ಭುಕುಸಿತ ಸಂಭವಿಸುತ್ತಲೇ ಇತ್ತೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ಭದ್ರಕ್, ಕೇಂದ್ರಪಾರ, ಬಾಲಸೋರ್ ಮತ್ತು ಸಮೀಪದ ಜಗತ್‌ಸಿಂಗ್‌ಪುರ ಜಿಲ್ಲೆಯಲ್ಲಿ ಗಾಳಿಯ ವೇಗವು ಗಂಟೆಗೆ 100 ಕಿ.ಮೀ ನಿಂದ 110 ಕಿ.ಮೀ ವೇಗದಲ್ಲಿ ಹಠಾತ್ ಹೆಚ್ಚಳಗೊಂಡಿದ್ದು, ಪಾರಾದೀಪ್‌ನಲ್ಲಿರುವ ಡಾಪ್ಲರ್ ಹವಾಮಾನ ರಾಡಾರ್‌ನ ನಿರಂತರ ಕಣ್ಗಾವಲಿನಲ್ಲಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಉಮಾಶಂಕರ್ ದಾಸ್ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳ ತಗ್ಗು ಪ್ರದೇಶಗಳನ್ನು ಹೈ ರಿಸ್ಕ್ ಝೋನ್ ಎಂದು ಗುರುತಿಸಲಾಗಿದ್ದು, ಈಗಾಗಲೇ ಇಲ್ಲಿಂದ ಸುಮಾರು 5.84 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
ತೀವ್ರ ಚಂಡಮಾರುತ ಇಂದು ಕ್ರಮೇಣ ದುರ್ಬಲಗೊಂಡು ರಾಜ್ಯದಲ್ಲಿ ಚಲಿಸುವುದರಿಂದ ಹೆಚ್ಚಿನ ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮೊಹಾಪಾತ್ರ ಹೇಳಿದ್ದಾರೆ.