ದಕ್ಷಿಣ ಕನ್ನಡ ವಿಧಾನ ಪರಿಷತ್ ಉಪ ಚುನಾವಣೆ; ಬೆಳ್ತಂಗಡಿಯ 49 ಮತಗಟ್ಟೆಯಲ್ಲಿ 98.22% ಮತದಾನ: ಬಿಜೆಪಿಗೆ ಅತ್ಯಧಿಕ ಮತಗಳ ಗೆಲುವು , ಶಾಸಕ ಹರೀಶ್ ಪೂಂಜ:

 

ಬೆಳ್ತಂಗಡಿ: ಕರ್ನಾಟಕ ವಿಧಾನಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಕ್ಷೇತ್ರಕ್ಕೆ ಉಪ ಚುನಾವಣೆಯು ಸೋಮವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಿತು. ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 49 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು ಮಹಿಳೆಯರು 351 ಪುರುಷರು 325 ಸೇರಿ ಒಟ್ಟು 676 ಮಂದಿ ಮತದಾರರಿದ್ದು ಅದರಲ್ಲಿ ಪುರುಷರು 323 ಮಹಿಳೆಯರು 345 ಮಂದಿ ಮತ ಚಲಾಯಿಸಿ ಶೇಕಡಾ 98.22% ಮತದಾನ ನಡೆದಿದೆ.ಜಿಲ್ಲೆಯಲ್ಲಿ  2904 ಪುರುಷ, 3128 ಮಹಿಳೆ ಸೇರಿದಂತೆ ಒಟ್ಟು  6032 ಮತದಾರರಿದ್ದು ಅದರಲ್ಲಿ 2839 ಪುರುಷ, 3067 ಮಹಿಳೆ ಸೇರಿದಂತೆ ಒಟ್ಟು 5906 ಮತದಾರರು ಮತ ಚಲಾಯಿಸಿ ಶೇಕಡ 97.91% ಮತದಾನ ನಡೆದಿದೆ.

ಮತ ಎಣಿಕೆ ಮಂಗಳೂರು ಸಂತ ಅಲೋಷಿಯಸ್ ಪದವಿಪೂರ್ವ ಕಾಲೇಜಿನಲ್ಲಿ ಅ.24ರಂದು ನಡೆಯಲಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಮತದಾನ ಶಾಂತಿಯುತವಾಗಿ ನಡೆದಿದ್ದು. ಉಜಿರೆ ಮತ ಗಟ್ಟೆ ಸೂಕ್ಷ್ಮ ಮತಗಟ್ಟೆಯಾಗಿತ್ತು.ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಮತಗಟ್ಟೆಯಲ್ಲಿ ಶಾಸಕ ಹರೀಶ್ ಪೂಂಜ ಮತ ಚಲಾಯಿಸಿದರಲ್ಲದೇ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಅತ್ಯಧಿಕ ಮತಗಳಿಂದ ಗೆಲುವಿನ ನಗೆ ಬೀರಲಿದ್ದಾರೆ ಎಂದು ತಿಳಿಸಿದ್ದಾರೆ.

error: Content is protected !!