ಬೆಳ್ತಂಗಡಿ: ಏಕಾಏಕಿ ತಾಲೂಕಿನ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ಜನರು ಆತಂಕಕ್ಕೊಳಗಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ತಾಲೂಕಿನಲ್ಲಿ ಮಂಗಳವಾರ ಮಳೆ ದೊಡ್ಡ ಪ್ರಮಾಣದಲ್ಲಿ ಸುರಿಯದಿದ್ದರೂ ಚಾರ್ಮಾಡಿ,ದಿಡುಪೆ, ನೆರಿಯ ಭಾಗದ ನದಿಗಳಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿ ರಸ್ತೆಗೆ ನೀರು ನುಗ್ಗಿದೆ.ನೆರಿಯದಲ್ಲಿ ಸೇತುವೆ ಮುಳುಗಡೆಯಾಗಿದೆಯಲ್ಲದೇ ಅಲ್ಲಲ್ಲಿ ರಸ್ತೆಗೆ ತೋಟಗಳಿಗೆ ನೀರು ನುಗ್ಗಿದೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಉಂಟಾಗಿದೆ.ಸ್ಥಳೀಯರು ಹೇಳುವಂತೆ 2019 ರ ನೆರೆಯ ನಂತರ ಮಂಗಳವಾರ ರಾತ್ರಿ ನದಿಗಳಲ್ಲಿ ಅತೀ ಹೆಚ್ಚು ನೀರು ಬಂದಿದೆ.ರಾತ್ರಿ ಏಳು ಗಂಟೆಯಿಂದ 9 ಗಂಟೆಯವರೆಗೆ ನೀರಿನ ಮಟ್ಟ ಏರಿಕೆ ಕಂಡಿದ್ದು ಮತ್ತೆ ಇಳಿಕೆಯಾಗಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.