ಮುಡಾ ಹಗರಣ: ಸೈಟ್ ವಾಪಸ್ ಮಾಡಲು ನಿರ್ಧಾರ: ಇಡಿ ತನಿಖೆಯಿಂದ ಸಿಗಲಿದೆಯೇ ರಿಲೀಫ್?: ಅರೆಸ್ಟ್ ಆಗ್ತಾರ ಸಿಎಂ ಸಿದ್ದರಾಮಯ್ಯ?

ಬೆಂಗಳೂರು: ರಾಜಕೀಯ ವಲಯದಲ್ಲಿ ಮುಡಾ ಹಗರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇಲ್ಲಿ ತನಕ ಯಾವುದೇ ಆರೋಪಗಳಿಲ್ಲದೆ ರಾಜಕೀಯ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣ ನಿಜವಾಗಿಯೂ ಸಂಕಷ್ಟವನ್ನೇ ತಂದಿಟ್ಟಿದೆ. ಇದರ ಜೊತೆಗೆ ಇಡಿ ತನಿಖೆಯ ಬಿಸಿ ಮುಟ್ಟಿದೆ. ಸದ್ಯ ಸೈಟ್ ವಾಪಸ್ ಮಾಡಲು ನಿರ್ಧಾರ ಮಾಡಲಾಗಿದೆ. ಹಾಗಾದ್ರೆ ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಿಲೀಫ್ ಸಿಗಲಿದೆಯೇ? ಸಿಎಂ ಅರೆಸ್ಟ್ ಆಗುತ್ತಾರಾ? ಈ ಪ್ರಶ್ನೆ ಈಗ ಎಲ್ಲರ ಮುಂದಿದೆ. ಈ ಬಗ್ಗೆ ಕಾನೂನು ತಜ್ಞರು ಏನ್ ಹೇಳ್ತಾರೆ?  ಮುಂದೆ ಓದಿ..

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಹಣಕಾಸು ಅವ್ಯವಹಾರದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿದೆ. ಈ ನಡುವೆ 14 ಸೈಟ್‌ಗಳನ್ನು ಮುಡಾಕ್ಕೆ ಹಿಂದಿರುಗಿಸಲು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮುಂದಾಗಿದ್ದಾರೆ. ಈ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು “ಮುಡಾದಿಂದ ಪಡೆದಿರುವ ನಿವೇಶನಗಳನ್ನು ಹಿಂದಿರುಗಿಸುತ್ತೇನೆ. ನನಗೆ ಪತಿಯೇ ಹೆಚ್ಚು, ಹೀಗಾಗಿ ನನಗೆ ಮಂಜೂರು ಮಾಡಿರುವ 14 ನಿವೇಶನಗಳನ್ನು ವಾಪಸ್ ಕೊಡುತ್ತೇನೆ” ಎಂದು ತಿಳಿಸಿದ್ದಾರೆ.

ಆದರೆ ಇದರಿಂದ ಸಿಎಂ ಕುಟುಂಬಕ್ಕೆ ಏನಾದರೂ ಪ್ರುಯೋಜನವಾಗುತ್ತಾ? ಈ ಬಗ್ಗೆ ಜಾರಿ ನಿರ್ದೇಶನಾಲಯದ ಮಾಜಿ ಜಂಟಿ ನಿರ್ದೇಶಕ ಸತ್ಯೇಂದ್ರ ಸಿಂಗ್ ಪ್ರತಿಕ್ರಿಯೆ ಹೀಗಿದೆ.
“ಸೈಟ್ ಹಿಂದಿರುಗಿಸುವುದು ಈ ಪ್ರಕರಣದಲ್ಲಿ ಇಡಿ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ, ಸೈಟ್ ಹಿಂದಿರುಗಿಸುವುದರಿAದ ಕೃತ್ಯ ನಡೆದಿಲ್ಲ ಎಂದು ಹೇಳಲಾಗುವುದಿಲ್ಲ. ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರು ಸುಳ್ಳು ದಾಖಲೆ ನೀಡಿ ಭೂಸ್ವಾಧೀನ ಮಾಡಿಕೊಂಡಿದ್ದಾರೆ ಎಂಬ ಆರೋಪವಿದ್ದು, ತನಿಖೆ ಮುಂದುವರಿಯಲಿದೆ. ಈ ಪ್ರಕರಣದಲ್ಲಿ ದಾಖಲಾಗಿರುವ ಮೂಲ ಎಫ್ಐಆರ್ ಅನ್ನು ಲೋಕಾಯುಕ್ತರು ದಾಖಲಿಸಿದ್ದಾರೆ. ಈಗ ಅದರ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿದ್ದು, ಸಂಪೂರ್ಣ ತನಿಖೆ ನಡೆಸಲಿದೆ. ಇಲ್ಲಿ, ಸೈಟ್ ವಾಪಸ್ ಕೊಡುವುದು ಮುಖ್ಯವಾದ ವಿಚಾರವೇ ಅಲ್ಲ. ತನಿಖೆ ಪ್ರಾರಂಭವಾದ ನಂತರ, ಹೇಗಾದರೂ ಮುಡಾಗೆ ಸೇರಿದ ಭೂಮಿಯನ್ನು ಇಡಿ ವಶಪಡಿಸಿಕೊಳ್ಳುತ್ತದೆ. ಏಕೆಂದರೆ ಪ್ರಕರಣವು ಭೂಮಿಗೆ ಸಂಬAಧಿಸಿದ್ದಾಗಿದೆ. ಈ ಕಾರಣದಿಂದ, ಸಿಎಂ ಕುಟುಂಬದವರು ಈಗಾಗಲೇ ಭೂಮಿಯನ್ನು ಹಿಂದಿರುಗಿಸಲು ನಿರ್ಧರಿಸಿರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

ಸಿಎಂ ಬಂಧನ ಸಾಧ್ಯವೇ?

ಎಫ್‌ಐಆರ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಎ1 ಆರೋಪಿ ಎಂದು ಹೆಸರಿಸಲಾಗಿದೆ. ಇಡಿ 2 ಸಂದರ್ಭಗಳಲ್ಲಿ ಆರೋಪಿಗಳನ್ನು ಬಂಧಿಸುತ್ತದೆ. ಮೊದಲನೆಯದಾಗಿ, ಆರೋಪಿಯು ತನಿಖೆಗೆ ಸಹಕರಿಸುವುದಿಲ್ಲ ಎಂದಾಗ ಮತ್ತು ಎರಡನೆಯದಾಗಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದಾಗ. ಹೀಗಾಗಿ ಮುಡಾದಲ್ಲಿ ಸಿದ್ದರಾಮಯ್ಯ ಬಂಧನವಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

error: Content is protected !!