ಕೋಲ್ಕತ್ತಾ: ಉದಯೋನ್ಮುಖ ಕ್ರಿಕೆಟ್ ಆಟಗಾರ ಕೊನೆಯುಸಿರೆಳೆದಿದ್ದು ಕ್ರೀಡಾಪಟುವಿನ ಸಾವಿಗೆ ಕ್ರೀಡಾಲೋಕವೇ ಶೋಕಸಾಗರದಲ್ಲಿ ಮುಳುಗಿದೆ.
ಕೋಲ್ಕತ್ತಾದ ಕ್ಲಬ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರನಾಗಿ ಹೆಸರು ಮಾಡಿದ್ದ ಆಸಿಫ್ ಹುಸೇನ್ (28) ಬಂಗಾಳದ ಯುವ ಹಾಗೂ ಪ್ರತಿಭಾವಂತ ಕ್ರಿಕೆಟಿಗ. ಇವರು ತಮ್ಮ ಮನೆಯಲ್ಲಿ ಬಿದ್ದು ತಲೆಗೆ ಬಲವಾದ ಏಟು ಆದ ಕಾರಣ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ವರ್ಷ ಆಸಿಫ್ ಕ್ಲಬ್ ಕ್ರಿಕೆಟ್‌ನಲ್ಲಿ ಸ್ಪೋರ್ಟಿಂಗ್ ಯೂನಿಯನ್‌ನೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದ್ದರು. ಕ್ರಿಕೆಟಿಗ ಬೆಂಗಾಲ್ ಪ್ರೊ ಟಿ20 ಲೀಗ್‌ನ ಪಂದ್ಯದಲ್ಲಿ 99ರನ್ ಗಳಿಸಿದ್ದರು. ಇವರ ಹಠಾತ್ ನಿಧನದಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
ಕ್ರಿಕೆಟಿಗನ ಸಾವಿಗೆ ಕ್ರೀಡಾಲೋಕ ಕಂಬನಿ ಮಿಡಿದಿದೆ.