ಬೆಳ್ತಂಗಡಿ: ಆರ್ ಪಿ ಸಿ ವತಿಯಿಂದ 3 ದಿನಗಳ ಚಾರಿಟಿ ಸೇವೆ: ಆಹಾರ ಧಾನ್ಯ, ಅಂಗನವಾಡಿ ಮಕ್ಕಳಿಗೆ ಬ್ಯಾಗ್ ವಿತರಣೆ: ಕರ್ನೋಡಿ ಶಾಲಾ ಬಿಸಿಯೂಟ ತಯಾರಿಕಾ ಕಟ್ಟಡ ದುರಸ್ತಿ

ಬೆಳ್ತಂಗಡಿ: ಆರ್ ಪಿ ಸಿ ವತಿಯಿಂದ ಲಾಯಿಲಾ ಮತ್ತು ಮೇಲಂತಬೆಟ್ಟು ಗ್ರಾಮಗಳಲ್ಲಿ ಸೆ.26,27 ಮತ್ತು 28ರಂದು 3 ದಿನ ಚಾರಿಟಿ ಸೇವೆ ನಡೆಸಲಾಗಿದೆ.

ಸೆ.26ರಂದು ಮೇಲಂತಬೆಟ್ಟು ಮತ್ತು ಲಾಯಿಲಾ ಗ್ರಾಮದಲ್ಲಿರುವ 50 ಕಡು ಬಡಕುಟುಂಬಗಳಿಗೆ 12 ಬಗೆಯ ಆಹಾರ ಧಾನ್ಯಗಳನ್ನು ವಿತರಿಸಲಾಯಿತು.

ಸೆ.27ರಂದು ಕರ್ನೋಡಿ, ಕನ್ನಾಜೆ ಮತ್ತು ಮೇಲಂತಬೆಟ್ಟು ಅಂಗನವಾಡಿ ಕೇಂದ್ರ ಮಕ್ಕಳಿಗೆ ಬ್ಯಾಗ್ ಮತ್ತು ಇನ್ನೀತರ ಕಲಿಕಾ ಸಾಮಾಗ್ರಿಗಳನ್ನು ನೀಡಲಾಯಿತು.

ಸೆ.28ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕರ್ನೋಡಿ ಇಲ್ಲಿನ ಬಿಸಿಯೂಟ ತಯಾರಿಕಾ ಕಟ್ಟಡದ ಸೋರುತ್ತಿರುವ ಹಿನ್ನಲೆ ಮೇಲ್ಛಾವಣಿಯನ್ನು ಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ ಸರಿಪಡಿಸಲಾಯಿತು.

ಕರ್ನೋಡಿ ಶಾಲೆಯ ಅಭಿವೃದ್ದಿಗೆ ಕೈ ಜೋಡಿಸಿದ ಆರ್ ಪಿ ಸಿ ಸದಸ್ಯರನ್ನು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಬಿ.ಕೆ ದನಂಜಯ್ ರಾವ್, ಸೇರಿದಂತೆ ಸಂಘದ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು, ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.

error: Content is protected !!