ತಿರುಪತಿಯಿಂದ ಮನೆಗೆ ತಂದ ಪ್ರಸಾದ ಲಡ್ಡಿನಲ್ಲಿ ತಂಬಾಕು..?!: ತೆಲಂಗಾಣದ ಭಕ್ತೆಯಿಂದ ಗಂಭೀರ ಆರೋಪ..!

ಸಾಂದರ್ಭಿಕ ಚಿತ್ರ

ತೆಲಂಗಾಣ: ತಿರುಪತಿಯಿಂದ ಮನೆಗೆ ತಂದ ಪ್ರಸಾದ ಲಡ್ಡಿನಲ್ಲಿ ತಂಬಾಕು ಸಿಕ್ಕಿರುವುದಾಗಿ ಖಮ್ಮಂ ಜಿಲ್ಲೆಯ ಭಕ್ತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಗೊಲ್ಲಗುಡೆಂ ಪಂಚಾಯತ್‌ನ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೋಂತು ಪದ್ಮಾವತಿ ಸೆಪ್ಟೆಂಬರ್ 19ರಂದು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತನ್ನ ಕುಟುಂಬ ಮತ್ತು ಅಕ್ಕಪಕ್ಕದ ಮನೆಯವರಿಗೆ ಕೊಡಲು ತಿರುಪತಿ ಲಡ್ಡು ತಂದಿದ್ದರು. ಎಲ್ಲರಿಗೂ ಹಂಚಲು ಲಡ್ಡು ತೆರೆದಾಗ ಸಣ್ಣ ಪೇಪರ್‌ನಲ್ಲಿ ಸುತ್ತಿದ ತಂಬಾಕಿನ ತುಂಡುಗಳಿದ್ದವು ಎಂದು ಹೇಳಿದ್ದಾರೆ.

ತಿರುಪತಿ ದೇವಸ್ಥಾನದ ಪ್ರಸಾದವಾದ ಲಾಡುಗಳಿಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿ ಜನರು ಆತಂಕಗೊಂಡಿರುವ ಬೆನ್ನಲ್ಲೇ ಭಕ್ತರೊಬ್ಬರ ಹೇಳಿಕೆ ಮತ್ತಷ್ಟು ಕಳವಳಕಾರಿಯಾಗಿದೆ. ಪವಿತ್ರವಾಗಿರಬೇಕಾದ ಪ್ರಸಾದದಲ್ಲಿ ಇಂತಹ ಪದಾರ್ಥಗಳು ಅದರಲ್ಲಿ ಕಂಡುಬAದಿದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

error: Content is protected !!