ಶಿರೂರಿನಲ್ಲಿ ಗುಡ್ಡ ಕುಸಿತ: ಮೂರನೇ ಹಂತದ ಶೋಧ ಕಾರ್ಯಾಚರಣೆ: ಮೃತದೇಹಗಳ ನಿರೀಕ್ಷೆಯಲ್ಲಿ ಕಾದು ಕುಳಿತಿರುವ ಕುಟುಂಬಸ್ಥರು: ಎರಡು ದಿನಗಳಾದರೂ ಸಿಗದ ಮೃತದೇಹ..!

ಉತ್ತರ ಕನ್ನಡ: ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮೂರನೇ ಹಂತದ ಶೋಧ ಕಾರ್ಯಾಚರಣೆ ಚುರುಕುಗೊಂಡಿದೆ. ಮರು ಕಾರ್ಯಾಚರಣೆ ಪ್ರಾರಂಭಿಸಿ ಎರಡು ದಿನಗಳಾದರೂ ವಾಹನಗಳ ಭಾಗಗಳು ದೊರೆಯುತ್ತಿವೆಯೇ ಹೊರತು ಮೃತದೇಹಗಳು ಪತ್ತೆ ಇಲ್ಲ.

ಕಾರ್ಯಾಚರಣೆಯಲ್ಲಿ ನದಿಗೆ ಬಿದ್ದು ನಾಪತ್ತೆಯಾಗಿದ್ದ ಗ್ಯಾಸ್ ಟ್ಯಾಂಕರ್‌ವೊಂದರ ಟೈರ್ ಚಸ್ಸಿ, ಮರದ ತುಂಡು ಸಿಕ್ಕಿವೆ. ಆದರೆ, ಮೃತದೇಹಗಳ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ ಕುಟುಂಬಸ್ಥರಿಗೆ ಎರಡನೇ ದಿನವೂ ನಿರಾಸೆಯಾಯಿತು. ಆದರೂ ಕುಟುಂಬಸ್ಥರು ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲಿ ಆಶಾಭಾವನೆಯಿಂದ ಕಾದು ಕುಳಿತಿದ್ದಾರೆ.

ಶುಕ್ರವಾರ ಗೋವಾದಿಂದ ಬಂದಿದ್ದ ಡ್ರಜ್ಜಿಂಗ್ ಯಂತ್ರದ ಮೂಲಕ ನದಿಗೆ ಬಿದ್ದ ಮಣ್ಣು ತೆರವು ಕಾರ್ಯ ಪ್ರಾರಂಭಿಸಲಾಗಿತ್ತು. ಶನಿವಾರದ ಕಾರ್ಯಾಚರಣೆಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ಸಹಕರಿಸಿದರು.

“ಹೇಗಾದರೂ ಮಾಡಿ ನಮ್ಮವರ ಮೃತದೇಹವನ್ನು ಹುಡುಕಿಕೊಡಿ” ಎಂದು ಮೃತ ಜಗನ್ನಾಥ ನಾಯ್ಕ ಅವರ ಸಂಬAಧಿಕರು ಮನವಿ ಮಾಡಿದ್ದಾರೆ.

error: Content is protected !!