ಬೆಳ್ತಂಗಡಿ: “ದಂಡ ಕಟ್ಟಲು ನಾವು ಸಿದ್ಧರಿದ್ದೇವೆ , ನಾವು ಕೇಳಿದ್ದನ್ನು ಮಾಡಲು ನೀವು ಸಿದ್ಧರಿದ್ದೀರಾ..? ಗೌರವಾನ್ವಿತ ಸರಕಾರಕ್ಕೆ ತಲುಪುವವರೆಗೆ ಶೇರ್ ಮಾಡಿ” ಹೀಗೊಂದು ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪತ್ರ ಬರೆದವರು ಯಾರು ಎಂಬ ನಿಖರ ಮಾಹಿತಿ ಇಲ್ಲ. ಆದರೆ ಇದು ಎಲ್ಲಾ ವಾಹನ ಸವಾರರ ಪರವಾಗಿ ಬರೆದಿರುವ ಪತ್ರವಾಗಿದೆ. ಹಾಗಾದ್ರೆ ಈ ಪತ್ರದಲ್ಲಿ ಏನು ಬರೆಯಲಾಗಿದೆ ಅಂತಿರಾ..?
ಗೌರವಾನ್ವಿತ ಸರ್ಕಾರಕ್ಕೆ,
ಓಹ್,
ನಮ್ಮ ರಕ್ಷಣೆಗೆ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಇದೆ. ನಮ್ಮ ಸುರಕ್ಷತೆಯ ಬಗ್ಗೆ ನಿಮಗೆ ಅಷ್ಟೊಂದು ಕಾಳಜಿ ಇದ್ದರೆ, ಮೊದಲು ಗುಂಡಿ ಮುಕ್ತ ರಸ್ತೆಗಳು, ಬೀದಿ ದೀಪಗಳು, ಸಿಗ್ನಲ್ ದೀಪಗಳು, ಸರಿಯಾದ ಟ್ರಾಫಿಕ್ ನಿಯಂತ್ರಣವನ್ನು ಸ್ಥಾಪಿಸಿ ನಂತರ ನಿಮ್ಮ ಅಧಿಕಾರಿಗಳಿಗೆ ದಂಡ ವಿಧಿಸಲು ಸೂಚಿಸಿ
ದಂಡ ಕಟ್ಟಲು ನಾವು ಸಿದ್ಧರಿದ್ದೇವೆ , ನಾವು ಕೇಳಿದ್ದನ್ನು ಮಾಡಲು ನೀವು ಸಿದ್ಧರಿದ್ದೀರಾ..?
ಸರಕಾರಕ್ಕೆ ತಲುಪುವವರೆಗೆ ಶೇರ್ ಮಾಡಿ..
ರಾಜ್ಯದ ಅನೇಕ ಕಡೆಯ ರಸ್ತೆಗಳು ಬಹಳಷ್ಟು ಹೊಂಡಮಯವಾಗಿಬಿಟ್ಟಿದೆ. ವಿಪರೀತ ಮಳೆಯಿಂದ ರಸ್ತೆಗೆ ಹಾನಿಯಾಗಿದೆ. ರಾಷ್ಟಿçÃಯ ಹೆದ್ದಾರಿಗಳು, ಒಳ ರಸ್ತೆಗಳು ತೀವ್ರ ಹದಗೆಟ್ಟಿದ್ದು ವಾಹನ ಸವಾರರು ಕಂಗಾಲಾಗಿದ್ದಾರೆ. ಸರಕಾರದ ಗಮನ ಸೆಳೆಯಲು ಯತ್ನಿಸಿದರೂ ಸದ್ಯ ಸರಕಾರ ರಸ್ತೆ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ಈ ರೀತಿಯ ಪತ್ರದ ಮೂಲಕ ಸರಕಾರದ ಕಿವಿ ಹಿಂಡುವ ಪಯತ್ನ ನಡೆದಿದೆ.