ಬೆಳ್ತಂಗಡಿ: ತಟ್ಟೆಯಲ್ಲಿ ಅನ್ನ ಬಿಟ್ಟರೆ ರೂ 20 ಕಾಣಿಕೆ ಹಾಕಬೇಕು ಎಂಬ ಬೋರ್ಡ್ ಪಡಂಗಡಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅಳವಡಿಸಿರುವುದು ಹಾಕಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅನ್ನ ಸಂತರ್ಪಣೆ ಸಮಯದಲ್ಲಿ ಹಲವಾರು ವಿವಿಧ ಆಹಾರ ಖಾದ್ಯಗಳ ಜೊತೆಗೆ ಅನ್ನ ಬಡಿಸಿಕೊಂಡು ಅದರಲ್ಲಿ ಅರ್ಧ ಊಟ ಮಾಡಿ ನಂತರ ಬೀಸಾಡುವುದು ವಾಡಿಕೆಯಾಗಿದೆ. ಅನ್ನ ಎಂಬುವುದು ಬಹಳ ಪವಿತ್ರವಾದದ್ದು. ರೈತರು ದೇಶದ ಬೆನ್ನೆಲುಬು ಅವರ ಕಠಿಣ ಶ್ರಮದ ಫಲವಾಗಿ ಅಕ್ಕಿ ನಮಗೆ ಸಿಗುತ್ತದೆ. ಅದೇ ರೀತಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ನೀಡಿದ ದೇಣಿಗೆಯಲ್ಲಿ ಅನ್ನದಾನ ಮಾಡುವಂತದ್ದಾಗಿರುತ್ತದೆ. ಸಾರ್ವಜನಿಕರ ಹಣ ಸಾಮಾಜಿಕವಾಗಿ ಉಪಯೋಗ ಆಗಬೇಕೇ ಹೊರತು ಈ ರೀತಿ ಹಾಳಾಗಬಾರದು ಎಂಬ ವಿಚಾರಕ್ಕೆ ಬೋರ್ಡ್ ಅಳವಡಿಸಲಾಗಿದೆ. ಅದಲ್ಲದೇ ಅನ್ನ ಬಹಳ ಮೌಲ್ಯಯುತವಾದ ವಸ್ತು ಅದನ್ನು ಭಕ್ತಿಯಿಂದ ಸ್ವೀಕರಿಸಬೇಕು ಬಿಸಾಡಬಾರದು ಎಂಬ ಸಂದೇಶ ಜನರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಈ ರೀತಿಯ ಬೋರ್ಡ್ ಅಳವಡಿಸಲಾಗಿದೆ. ಎಂದು ಸಮಿತಿಯ ಸಂತೋಷ್ ಜೈನ್ ಪಡಂಗಡಿ ಮಾಹಿತಿ ನೀಡಿದ್ದಾರೆ. ಇದೀಗ ಈ ಬೋರ್ಡ್ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತಿದ್ದರಲ್ಲದೆ ಅನ್ನವನ್ನು ಬಿಸಾಡಬೇಡಿ ಬೆಲೆ ನೀಡಿ ಎಂಬ ಸಂದೇಶವನ್ನು ಹಾಕುತಿದ್ದಾರೆ.