ರಾಜಕೀಯ ರಹಿತ ಧಾರ್ಮಿಕ ಆಚರಣೆಗಳು ಅರ್ಥಪೂರ್ಣ: ಶಶಿಧರ್ ಶೆಟ್ಟಿ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಓಡೀಲು, 34 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ:

 

 

ಬೆಳ್ತಂಗಡಿ: ಎಲ್ಲರೂ ಒಗ್ಗಟ್ಟಾಗಿ ಐಕ್ಯ ಭಾವನೆಯಲ್ಲಿ ಇರಬೇಕು ಎಂಬುವುದೇ ಇಂತಹ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಉದ್ಧೇಶವಾಗಿದೆ. ಎಂದು ಬರೋಡದ ಉದ್ಯಮಿ ಓಡೀಲು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಹೇಳಿದರು. ಅವರು ಶ್ರೀ ಕ್ಷೇತ್ರ ಓಡೀಲು ಇಲ್ಲಿ ನಡೆಯುತ್ತಿರುವ 34 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 

 

 

ಮನುಷ್ಯನಾಗಿ ಹುಟ್ಟಿದವನು ದಾನ ಧರ್ಮಗಳನ್ನು ಮಾಡಬೇಕು ಎಂಬ ಮಾತಿದೆ.‌ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ ದೇವರು ನಮ್ಮನ್ನು ಹರಸುತ್ತಾನೆ ಅಂತಹ ವ್ಯಕ್ತಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ.

 

 

ಅದರೆ ಈಗ ರಾಜಕೀಯ ಉದ್ಧೇಶದಿಂದ ಪಕ್ಷಕ್ಕೊಂದು ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿರುವುದು ಬೇಸರದ ವಿಚಾರ. ಯಾವುದೇ ಕಾರಣಕ್ಕೂ ದೇವಸ್ಥಾನ, ದೈವಸ್ಥಾನ, ಧಾರ್ಮಿಕ ಕಾರ್ಯಕ್ರಮಗಳು ರಾಜಕೀಯ ರಹಿತವಾಗಿ ಎಲ್ಲರೂ ಒಂದೇ ಮನಸ್ಸಿನಿಂದ ಒಟ್ಟಾಗಿ ಸೇರಿಕೊಂಡು ಸಂಪ್ರದಾಯಿಕವಾಗಿ ಆಚರಣೆ ಮಾಡಿದರೆ ಅದು ಮತ್ತಷ್ಟು ಅರ್ಥಪೂರ್ಣವಾಗಿ ಮೂಡಿ ಬರಲು ಸಾಧ್ಯವಿದೆ ಎಂದರು. ಹಿಂದೂ ಬಾಂಧವರ ಬಹಳ ನಂಬಿಕೆಯ ಪುಣ್ಯ ಕ್ಷೇತ್ರ ತಿರುಪತಿಯಾಗಿದೆ. ಯಾಕೆಂದರೆ ಕುಟುಂಬದ ಹರಕೆ (ಮುಡಿಪು) ಕೊಂಡೊಗುವುದಿದ್ದರೆ ಕುಟುಂಬಿಕರು ಸೇರಿಕೊಂಡು ಪುಣ್ಯ ಕ್ಷೇತ್ರ ಸಂದರ್ಶಿಸಬೇಕಿದ್ದರೆ ವಾಹನ ವ್ಯವಸ್ಥೆ ಮಾಡಿಕೊಂಡು ಹೋಗಬೇಕಾದ ಸ್ಥಿತಿ ನಮ್ಮ ತುಳುನಾಡಿಗಿದೆ.ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ತಿರುಪತಿಗೆ ನೇರ ರೈಲು ಸಂಪರ್ಕ ವ್ಯವಸ್ಥೆ ಮಾಡುವಂತೆ ಸಂಸದರು ಸೇರಿದಂತೆ ಜನಪ್ರತಿನಿಧಿಗಳಿಗೆ ಒತ್ತಾಯವನ್ನು ನಾವೆಲ್ಲರೂ ಸೇರಿ ಮಾಡಬೇಕು ಎಂದರು.

 

 

 

ಉಜಿರೆ ಎಸ್.ಡಿ.ಎಂ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಇಚ್ಲಂಪಾಡಿ ಧಾರ್ಮಿಕ ಉಪನ್ಯಾಸ ಮಾಡಿದರು.
ಗಣೇಶೋತ್ಸವಕ್ಕೆ ಸಹಕಾರ ನೀಡಿದ ದಾನಿಗಳಾದ ಲ್ಯಾನ್ಸಿ ಪಿಂಟೋ, ಜೋಯೆಲ್ ಮೆಂಡೊನ್ಸಾ ಇವರನ್ನು ಗೌರವಿಸಲಾಯಿತು.ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜ್ ಪ್ರಕಾಶ್ ಮೂಡ್ಡೈಲು ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಡಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ , ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ವಿಜಯ ಸಾಲ್ಯಾನ್ ಪಣಕಜೆ, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಪುರಿಪಟ್ಟ, ಕೋಶಾಧಿಕಾರಿ ಲಕ್ಷ್ಮೀಕಾಂತ್ ಶೆಟ್ಟಿ ಮೂಡ್ಡೈಲು, ಉಪಸ್ಥಿತರಿದ್ದರು, ಸಮಿತಿಯ ಗೌರವ ಸಲಹೆಗಾರ ಜಯಕರ್ ಶೆಟ್ಟಿ ಮೂಡ್ಡೈಲು ಸ್ವಾಗತಿಸಿದರು.ನಿತಿನ್ ಗುರುವಾಯನಕೆರೆ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಅಶ್ವಿತ್ ಮೂಲ್ಯ ಓಡೀಲು ಧನ್ಯವಾದವಿತ್ತರು.

error: Content is protected !!