20 ವರ್ಷಗಳಿಂದ ದುರಸ್ಥಿ ಕಾಣದ ಸರಳಿಕಟ್ಟೆ – ಗೋವಿಂದ ಗುರಿ ರಸ್ತೆ: ಬಾರ್ಯ ಪಂಚಾಯತ್ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ: ಅಧಿಕಾರಿಗಳು ರಸ್ತೆ ವೀಕ್ಷಣೆಗೆ ಬರಬೇಕೆಂದು ಗ್ರಾಮಸ್ಥರ ಪಟ್ಟು


ಬಾರ್ಯ: ಕಳೆದ 20 ವರ್ಷಗಳಿಂದ ದುರಸ್ಥಿ ಕಾಣದ ಬಾರ್ಯ ಗ್ರಾಮ ಪಂಚಾಯತ್ ನ ಸರಳಿಕಟ್ಟೆ – ಗೋವಿಂದ ಗುರಿ ರಸ್ತೆ ಅನೇಕ ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದುರಸ್ಥಿಗೆ ಎಷ್ಟೇ ಮನವಿ ನೀಡಿದರೂ ಇಲ್ಲಿಯ ತನಕ ಪ್ರಯೋಜನವಾಗದೇ ಇರುವುದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಆ.28ರಂದು ಗ್ರಾಮಸಭೆಯಲ್ಲಿ ಅಧಿಕಾರಿಗಳು ಆ ರಸ್ತೆಯನ್ನು ನೋಡಲು ಬರಲೇ ಬೇಕೆಂದು ಪಟ್ಟು ಹಿಡಿದಿದ್ದರು.

ಸರಳಿಕಟ್ಟೆ – ಗೋವಿಂದ ಗುರಿ, ಸುಮಾರು 600 ಮೀಟರ್ ನಷ್ಟು ರಸ್ತೆ ಹೊಂಡಮಯವಾಗಿದ್ದು ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ. ಮಾತ್ರವಲ್ಲದೆ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಹೀಗಾಗಿ ಬಾರ್ಯ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆ ರಸ್ತೆಗೆ ಅಧಿಕಾರಿಗಳು ಬರಬೇಕೆಂದು ಒತ್ತಾಯಿಸಿದ್ದು, ಅವರ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ರಸ್ತೆ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಶೀಘ್ರವಾಗಿ ಈ ರಸ್ತೆಯನ್ನು ದುರಸ್ಥಿ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಾರ್ಯ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!