ರಥದ ಮೇಲಿನ ಬೆಳ್ಳಿ ಮೂರ್ತಿ ಬಿದ್ದು ಬಾಲಕ ಸಾವು..!: ಅವಘಡದಿಂದ ಅರ್ಧಕ್ಕೆ ನಿಂತ ರಥೋತ್ಸವ

ಬೆಳಗಾವಿ: ರಥೋತ್ಸವದ ವೇಳೆ ರಥದ ಮೇಲಿನ ಬೆಳ್ಳಿಯ ನವಿಲು ಆಕಾರದ ಮೂರ್ತಿ ಬಿದ್ದು 13 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ನಡೆದಿದೆ.

ಪ್ರತಿವರ್ಷದಂತೆ ಶ್ರಾವಣ ಕೊನೆಯ ಸೋಮವಾರ ಚಚಡಿ ಗ್ರಾಮದ ಸಂಗಮೇಶ್ವರ ರಥೋತ್ಸವ ಆಯೋಜಿಸಲಾಗಿತ್ತು. 30 ಅಡಿ ಎತ್ತರದ ರಥದ ಮೇಲೆ 5 ಕೆಜಿ ತೂಕದ ಬೆಳ್ಳಿಯ ನವಿಲು ಅಳವಡಿಸಲಾಗಿತ್ತು. ಪ್ರತಿ ವರ್ಷ ಎಳೆದುಕೊಂಡು ಹೋಗುತ್ತಿದ್ದ ರಸ್ತೆಯಲ್ಲೇ ಈ ಬಾರಿಯೂ ರಥವನ್ನು ಗ್ರಾಮಸ್ಥರು ಎಳೆಯುತ್ತಿದ್ದರು. ದೇವಸ್ಥಾನದಿಂದ ತುಸು ದೂರ ರಥವನ್ನು ಎಳೆಯುತ್ತಿದ್ದು, ಆದರೆ, ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಹಾಳಾದ ರಸ್ತೆಯಿಂದ ರಥ ಅತ್ತಿತ್ತ ಹೊರಳಾಡಿ ಕಳಸದ ಮೇಲಿನ ಬೆಳ್ಳಿ ನವಿಲು ಕಿತ್ತು ಶಿವಾನಂದ ರಾಜಕುಮಾರ ಸಾವಳಗಿ(13) ಎಂಬ ಬಾಲಕನ ತಲೆಯ ಮೇಲೆ ಬಿದ್ದಿದೆ. ಈ ವೇಳೆ ಬಾಲಕನ ತಲೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.
ಈ ಅವಘಡದಿಂದ ರಥೋತ್ಸವ ಅರ್ಧಕ್ಕೆ ನಿಂತಿದ್ದು, ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

error: Content is protected !!