‘ಕಾಂತಾರ 2’ ಚಿತ್ರದಲ್ಲಿ ಕೇರಳದ ಪುರಾತನ ಸಮರ ಕಲೆ: ‘ಕಲರಿಪಯಟ್ಟು’ ಅಭ್ಯಾಸದಲ್ಲಿ ನಾಯಕ ನಟ ರಿಷಬ್ ಶೆಟ್ಟಿ ಇದೇ ಸಮರ ಕಲೆಯನ್ನು ಡಿವೈನ್ ಸ್ಟಾರ್ ಆಯ್ಕೆ ಮಾಡಿದ್ದೇಕೆ ?

ಬೆಂಗಳೂರು: ‘ಕಾಂತಾರ’ ಇಡೀ ಚಿತ್ರರಂಗದಲ್ಲಿ ದೊಡ್ಡದಾಗಿ ಸದ್ದು ಮಾಡಿದ ಸಿನಿಮಾ. ಇದಕ್ಕಾಗಿಯೇ ಈ ಬಾರಿ ಈ ಚಿತ್ರಕ್ಕೆ ಅಂತರಾಷ್ಟಿçÃಯ ಪ್ರಶಸ್ತಿಯೂ ಲಭಿಸಿತು. ಸದ್ಯ ‘ಕಾಂತಾರ: ಚಾಪ್ಟರ್ 1’ ಟೈಟಲ್ ನಲ್ಲಿ ಚಿತ್ರೀಕರಣವಾಗುತ್ತಿರುವ ಕಾಂತಾರದ 2ನೇ ಭಾಗದಲ್ಲಿ ರಿಷಬ್ ಶೆಟ್ಟಿ ಅವರು ಕೇರಳದ ಪುರಾತನ ಸಮರ ಕಲೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ರಿಷಬ್ ಶೆಟ್ಟಿ ಅವರೇ ನಿರ್ದೇಶಿಸಿ, ನಟಿಸುತ್ತಿರುವ ಈ ಸಿನಿಮಾ ಭಾರಿ ಬಜೆಟ್ ಹೊಂದಿದೆ. ಈಗಾಗಲೆ ಅವರು ತಿಳಿಸಿರುವಂತೆ ಕಾಂತಾರ ಚಿತ್ರದ ಮುಂದಿನ ಭಾಗ ಅದು ಹಿಂದಿನ ಕಥೆಯಾಗಿರಲಿದೆ. ಅಂದರೆ ರಾಜನ ಕತೆ ಅಂತ ಹೇಳ್ಬೋದು. ಈ ಸಿನಿಮಾದಲ್ಲಿ ನಡೆಯುವ ಯುದ್ಧವನ್ನು ಅಂದಿನ ಯುದ್ದದಂತೆ ತೋರಿಸುವ ಜವಬ್ಧಾರಿ ಇವರದ್ದಾಗಿದೆ. ಹೀಗಾಗಿ ಇವರು ಕೇರಳದ ಪುರಾತನ ಸಮರ ಕಲೆ ‘ಕಲರಿಪಯಟ್ಟು’ ಅನ್ನು ಕಲಿಯುತ್ತಿದ್ದಾರೆ. ಸಿನಿಮಾದ ನಾಯಕ ‘ಕಲರಿಪಯಟ್ಟು’ ಸಮರ ಕಲೆಯ ಪರಿಣಿತನಾಗಿರುತ್ತಾನೆ. ಹೀಗಾಗಿ ‘ಕಲರಿಪಯಟ್ಟು’ ಸಮರ ಅಭ್ಯಾಸದಲ್ಲಿ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ.

ತುಳುನಾಡಿನ ಸೃಷ್ಟಿಕರ್ತ ಎಂದೇ ನಂಬಲಾಗಿರುವ ಪರಶುರಾಮ, ‘ಕಳರಿಪಯಟ್ಟು’ ಸಮರ ಕಲೆಯನ್ನು ಶಿವನಿಂದ ಕಲಿತನು ಎಂಬ ಪ್ರತೀತಿ ಇದೆ. ಈ ಕಾರಣಕ್ಕಾಗಿಯೂ ಸಿನಿಮಾದಲ್ಲಿ ‘ಕಳರಿಪಯಟ್ಟು’ವಿಗೆ ವಿಶೇಷ ಸ್ಥಾನವಿದೆಯಂತೆ

ರಿಷಬ್ ಶೆಟ್ಟಿಯವರ ಹುಟ್ಟೂರಾದ ಕೆರಾಡಿ ಬಳಿ ದೊಡ್ಡ ಸೆಟ್ ಹಾಕಿ ‘ಕಾಂತಾರ 2’ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾ ಚಿತ್ರೀಕರಣ ಮೂರು ಶೆಡ್ಯೂಲ್‌ಗಳು ಈಗಾಗಲೇ ಮುಗಿದಿವೆ. ಇದೀಗ ನಾಲ್ಕನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗುತ್ತಿದ್ದು, ಈ ನಾಲ್ಕನೇ ಹಂತದಲ್ಲಿ ಸಿನಿಮಾದ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಅದಕ್ಕಾಗಿಯೇ ಈಗ ರಿಷಬ್ ಶೆಟ್ಟಿ ತಯಾರಾಗುತ್ತಿದ್ದಾರೆ.

error: Content is protected !!