ಕಾಳಿ ನದಿಗೆ ಬಿದ್ದಿದ್ದ ಲಾರಿ ಹೊರಕ್ಕೆ: ನಿರಂತರ 9 ಗಂಟೆಗಳ ಕಾರ್ಯಾಚರಣೆ: ಈಶ್ವರ ಮಲ್ಪೆ ತಂಡದ ಪ್ರಯತ್ನ ಸಫಲ

ಉ.ಕ: ಕೋಡಿಭಾಗ್ ಸೇತುವೆ ಕಾಳಿ ನದಿಗೆ ಬಿದ್ದು ಲಾರಿಯೊಂದು ನದಿ ಪಾಲಾದ ಘಟನೆ ಆ.07ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿತ್ತು. ನಿನ್ನೆ ನದಿಗೆ ಬಿದ್ದಿದ್ದ ಲಾರಿ ಹೊರಕ್ಕೆ ತೆಗೆಯುವಲ್ಲಿ ರಕ್ಷಣಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಮಳೆ ಕಡಿಯಾಗಿದ್ದ ಹಿನ್ನೆಲೆ ನದಿ ನೀರು ತಗ್ಗಿದ್ದು ಹೀಗಾಗಿ ಆ.15ರಂದು ಬೆಳಗ್ಗೆ ಐಆರ್‌ಬಿ ಹಾಗೂ ಜಿಲ್ಲಾಡಳಿತದಿಂದ ಜಂಟಿ ಕಾರ್ಯಾಚರಣೆ ಮಾಡಲಾಗಿದೆ.

ತಮಿಳುನಾಡು ಮೂಲದ ಸೆಂಥಿಲ್ ಒಡೆತನದ ಲಾರಿಯನ್ನು 2 ಕ್ರೇನ್, 3 ಟೋಯಿಂಗ್ ವೆಹಿಕಲ್, ಈಶ್ವರ ಮಲ್ಪೆ ತಂಡದಿAದ ಹೊರತೆಗೆಯಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಸೇರಿ 100ಕ್ಕೂ ಹೆಚ್ಚು ಜನರ ಪ್ರಯತ್ನ ಫಲ ನೀಡಿದೆ.

error: Content is protected !!