ಅಂಬೇಡ್ಕರ್ ಜೀವನ ಚರಿತ್ರೆ ಹೂವುಗಳಲ್ಲಿ ಅನಾವರಣ: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಣ್ಸೆಳೆಯುತ್ತಿರುವ ಫ್ಲವರ್‌ಶೋ

ಬೆಂಗಳೂರು: ದೇಶಾದ್ಯಂತ ಇಂದು 78ನೇ ಸ್ವಾತಂತ್ರ ದಿನಾಚರಣೆಯ ಸಂಭ್ರಮ ಮನೆಮಾಡಿದ್ದು ಎಲ್ಲೆಲ್ಲೂ ಬಾನೆತ್ತರ ತ್ರಿವರ್ಣ ಧ್ವಜ ಹಾರುತ್ತಿದೆ. ಈ ಮಧ್ಯೆ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫ್ಲವರ್‌ಶೋ ಲಕ್ಷಾಂತರ ಜನರನ್ನು ಸೆಳೆಯುತ್ತಿದೆ.

ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫ್ಲವರ್‌ಶೋನಲ್ಲಿ ಈ ಬಾರಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಅನಾವರಣಗೊಂಡಿದೆ. ಅಂಬೇಡ್ಕರ್ ಅವರ ಜೀವನದ ನಾನಾ ಆಯಾಮಗಳು, ಸಂಗತಿಗಳು ವಿದೇಶಿ ಹಾಗೂ ಸ್ವದೇಶಿ ಹೂಗಳಿಂದ ಅನಾವರಣಗೊಂಡಿದ್ದು, ಅಂಬೇಡ್ಕರ್ ಅವರು ಬೆಳೆದು ಬಂದ ಹಾದಿ, ರಾಜಕೀಯ ಸವಾಲು, ಹೋರಾಟದ ದಿನಗಳನ್ನು ಹೂವುಗಳ ಮೂಲಕ ಅನಾವರಣಗೊಳಿಸಲಾಗಿದೆ. ಇದಕ್ಕೆ ಸುಮಾರು 7 ರಿಂದ 8 ಲಕ್ಷ ಹೂಗಳನ್ನು ಬಳಸಿಕೊಳ್ಳಲಾಗಿದ್ದು 60ಕ್ಕೂ ಹೆಚ್ಚು ಬಗೆಯ ಹೂಗಳಿಂದ ಅಂಬೇಡ್ಕರ್ ಥೀಮ್ ನಿರ್ಮಾಣವಾಗಿದೆ. ಈ ವಿಶೇಷ ಪುಷ್ಪ ಪ್ರದರ್ಶನ ಕಣ್ತುತುಂಬಿಕೊಂಡ ಜನ ಸಂತಸಗೊಂಡಿದ್ದಾರೆ.

ಫ್ಲವರ್ ಶೋ ನಡೆಸಿರುವ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಅನೇಕರು, ಮನಸೂರೆಗೊಳ್ಳುವಂತ ಫ್ಲವರ್ ಶೋ ಇದಾಗಿದೆ ಎಂದಿದ್ದಾರೆ. ಜೊತೆಗೆ ಇಡೀ ಭಾರತದ ಜನ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಆಶ್ರಯದಲ್ಲಿ ಜೀವಿಸುತ್ತಿದ್ದಾರೆ. ಅವರ ಇತಿಹಾಸ ಹೂವುಗಳ ಮೂಲಕ ಅನಾವರಣಗೊಂಡಿರುವುದು ವಿಶೇಷವಾಗಿದೆ ಎಂದಿದ್ದಾರೆ.

10ನೇ ತರಗತಿಯ ವಿದ್ಯಾರ್ಥಿಯೊಬ್ಬ ಮಾತನಾಡಿ, “ಅಂಬೇಡ್ಕರ್ ಮತ್ತು ನಮ್ಮ ದೇಶದ ಇತಿಹಾಸ ತುಂಬಾ ಜನರಿಗೆ ಪರಿಚಯವಿಲ್ಲ. ಈ ಬಗ್ಗೆ ಅಸಡ್ಡೆಯ ವಾತಾವರಣವಿದೆ. ಆದರೆ ಫ್ಲವರ್ ಶೋ ಮಾಹಿತಿಯ ಕೊರತೆ ತುಂಬುವಂತಿದೆ” ಎಂದು ಹೇಳಿದ್ದಾರೆ.

error: Content is protected !!