ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸೋಮವಾರದಿಂದ ಪ್ರಾರಂಭ..!: ಸೋಮಂತಡ್ಕ ಸೇರಿದಂತೆ ಭಾರೀ ಸಮಸ್ಯೆ ಇರುವಲ್ಲಿ ತುರ್ತು ಕಾಮಗಾರಿ: ಮುಗೇರೋಡಿ ಕನ್ಸ್ ಸ್ಟ್ರಕ್ಸನ್ಸ್ ಕಾಮಗಾರಿಯ ನಿರ್ವಹಣೆ:

 

 

 

ಬೆಳ್ತಂಗಡಿ: ಕೊನೆಗೂ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ.ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ದ್ವಿಪಥ ರಸ್ತೆ ಅಗಲೀಕರಣದ ಕಾಮಗಾರಿಯನ್ನು ಮಂಗಳೂರಿನ ಮುಗೇರೋಡಿ ಕನ್ಸ್ ಸ್ಟ್ರಕ್ಸನ್ಸ್ ನಿರ್ವಹಿಸಲಿದೆ. ನಾಳೆ ಅಥವಾ ಅಗಸ್ಟ್ 12 ಸೋಮವಾರದಿಂದ ವಾಹನ ಸಂಚಾರ ಭಾರೀ ಸಮಸ್ಯೆ ಇರುವಲ್ಲಿ ತುರ್ತು ಕಾಮಗಾರಿಯನ್ನು ಎಂ.ಸಿ.‌ಕೆಯವರು ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಈಗಾಗಲೇ ಡಿ.ಪಿ.‌ಜೈನ್ ಕಂಪನಿ ಗುತ್ತಿಗೆಯನ್ನು ಪಡೆದು ಕಳೆದ ಒಂದು ವರ್ಷಗಳಿಂದ ಕಾಮಗಾರಿ ಪ್ರಾರಂಭಿಸಿತ್ತು. ಅದರೆ ರಸ್ತೆಯನ್ನು ಅವೈಜ್ಞಾನಿಕ ರೀತಿಯಲ್ಲಿ ಸಿಕ್ಕಿದ ಕಡೆಗಳಲ್ಲಿ ಅಗೆದು ಹಾಕಿ ಚರಂಡಿ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಮಾಡಿದ್ದರಿಂದ ಮಳೆಗಾಲದಲ್ಲಿ ವಾಹನ ಸಂಚಾರ ಮಾಡದಂತಹ ಸ್ಥಿತಿ ನಿರ್ಮಾಣವಾಗಿ ವಾಹನ ಸವಾರರು ಪರದಾಡುವಂತಾಗಿತ್ತು ಈ ಬಗ್ಗೆ  ಆಕ್ರೋಶ ವ್ಯಕ್ತಪಡಿಸುತಿದ್ದರಲ್ಲದೇ ಅಲ್ಲಲ್ಲಿ ಶ್ರಮದಾನದ ಮೂಲಕ ಹೆದ್ದಾರಿ ದುರಸ್ತಿ ಕೆಲಸವನ್ನು ಮಾಡುತಿದ್ದಾರೆ.ಅದ್ದಲ್ಲದೇ ಡಿ.ಪಿ. ಜೈನ್ ಕಂಪನಿಯ ಅಸಮರ್ಪಕ  ಕಾಮಗಾರಿಯ ಬಗ್ಗೆ ಶಾಸಕ ಹರೀಶ್ ಪೂಂಜ, ಸಂಸದ ಬ್ರಿಜೇಶ್ ಚೌಟ, ಹಾಗೂ  ಜಿಲ್ಲಾಧಿಕಾರಿ ಸೇರಿದಂತೆ  ಅಧಿಕಾರಿಗಳೇ ಅಸಾಮಾಧಾನ ಗೊಂಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಗುತ್ತಿಗೆದಾರರ ಬದಲಾವಣೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ‌

error: Content is protected !!