ಕಾಶಿಬೆಟ್ಟಿನಲ್ಲಿ ‘ಟ್ರಾಫಿಕ್’ ಜಾಮ್, ಶಾಲಾ ಮಕ್ಕಳು, ಕೆಲಸಕ್ಕೆ ತೆರಳುವವರ ಪರದಾಟ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಗಿಯದ ಗೋಳು…! ಮತ್ತೆ ಸಿಲುಕಿಕೊಂಡ ಲಾರಿ, ಮತ್ತೆ ಅದೇ ಸಮಸ್ಯೆ:

 

ಬೆಳ್ತಂಗಡಿ: ಪುಂಜಾಲಕಟ್ಟೆ- ಚಾರ್ಮಾಡಿ‌ ರಾಷ್ಟ್ರೀಯ ಹೆದ್ದಾರಿಯ ಕಾಶಿಬೆಟ್ಟು ಎಂಬಲ್ಲಿ ಪ್ರತೀ ದಿನ 5 ನಿಮಿಷಕ್ಕೊಮ್ಮೆ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು ಈ ಸಮಸ್ಯೆಯನ್ನು ಕೇಳುವವರೇ ಇಲ್ಲಾ ಎಂಬತ್ತಾಗಿದೆ.

ಆ.10ರಂದು‌ ಬೆಳಗ್ಗೆ ಸುಮಾರು 8:30 ರ ಹೊತ್ತಿಗೆ ಹೊಂಡಮಯವಾಗಿರುವ ರಸ್ತೆಯಾದ ಕಾಶಿಬೆಟ್ಟುವಿನಲ್ಲಿ ಲಾರಿ ಜಾಮ್ ಆಗಿದ್ದು ಶಾಲಾ, ಕಾಲೇಜ್ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಬಾರೀ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ಸಿನಲ್ಲಿ ಕುಳಿತ ವಿದ್ಯಾರ್ಥಿಗಳು ಕ್ಲಾಸ್ ಮಿಸ್ ಮಾಡಿಕೊಳ್ಳುವ ಚಿಂತೆಯಲ್ಲಿದ್ದರೆ ಕೆಲಸಕ್ಕೆ ತೆರಳುವವರು ಹಾಜರಾತಿ ಕಳೆದುಕೊಳ್ಳುವ ಚಿಂತೆಯಲ್ಲಿ ಈ ರಸ್ತೆಯ ಗೋಳು ಸಾಕಪ್ಪಾ ಅಂತಿದ್ದಾರೆ.

ಕಾಶಿಬೆಟ್ಟು ರಸ್ತೆ ಸಾರ್ವಜನಿಕರಿಗೆ ಬಾರೀ ತೊಂದರೆ ಉಂಟು ಮಾಡುತ್ತಿದೆ. ಕೊನೆಪಕ್ಷ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರದವನ್ನಾದರೂ ಮಾಡಲಿ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ..

error: Content is protected !!