ಪುಂಜಾಲಕಟ್ಟೆ- ಚಾರ್ಮಾಡಿ ಕಾಮಗಾರಿ ಕಂಪನಿ ಬದಲಾವಣೆ…? ಮೊಗ್ರೋಡಿ ಕನ್ ಸ್ಟ್ರಕ್ಸನ್ಸ್ ಕೆಲಸ ಮುಂದುವರಿಸುವ ಸಾಧ್ಯತೆ : ಶಾಸಕ ಹರೀಶ್ ಪೂಂಜ, ಸಂಸದ ಚೌಟ ಸೇರಿದಂತೆ ಅಧಿಕಾರಿಗಳಿಗೂ ಕಾಮಗಾರಿಯ ಬಗ್ಗೆ ಅಸಾಮಾಧಾನ..! ಆದಷ್ಟು ಶೀಘ್ರ ರಸ್ತೆಯ ಪರಿಸ್ಥಿತಿ ‌ಬದಲಾಗಲಿ ಎಂಬುದೇ ಸಾರ್ವಜನಿಕರ ಪ್ರಾರ್ಥನೆ

 

 

ಬೆಳ್ತಂಗಡಿ: ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು ಡಿ.ಪಿ.ಜೈನ್ ಕನ್ಸ್ ಸ್ಟ್ರಕ್ಸನ್ ಗುತ್ತಿಗೆಯನ್ನು ಪಡೆದುಕೊಂಡು ಕಾಮಗಾರಿಯನ್ನು ಪ್ರಾರಂಭಿಸಿದರೂ ಹಲವಾರೂ ಅವ್ಯವಸ್ಥೆಗಳಿಂದ ರಸ್ತೆಯಲ್ಲಿ ಸಂಚಾರ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಅದರ ಬೆನ್ನಲ್ಲೇ ಡಿ.ಪಿ. ಜೈನ್ ಕಂಪನಿಯ ಕಾರ್ಮಿಕರು ಸಂಬಳ ನೀಡಿಲ್ಲ ಎಂದು ಪ್ರತಿಭಟನೆಯನ್ನು ಮಾಡುತ್ತಿದ್ದು, ಇದರಿಂದ ಮತ್ತಷ್ಟು ಸಮಸ್ಯೆಗಳು ಎದುರಾಗಿದ್ದವು. ಇದರ ಬೆನ್ನಲ್ಲೇ ಕಾಮಗಾರಿಯ ಜವಾಬ್ದಾರಿಯನ್ನು ಮೊಗ್ರೋಡಿ ಕನ್ ಸ್ಟ್ರಕ್ಷನ್ ಅವರಿಗೆ ನೀಡುವ ಬಗ್ಗೆ ಮಾತುಕತೆಗಳು ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಕೆಲವು ಸಮಯಗಳಿಂದ ಈ ರಸ್ತೆಯ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಡಿ.ಪಿ.ಜೈನ್ ಅವರು ಅವ್ಯವಸ್ಥಿತ ರೀತಿಯಲ್ಲಿ ಕಾಮಗಾರಿ ನಿರ್ವಹಿಸಿದ ಪರಿಣಾಮ ಮಳೆ ಪ್ರಾರಂಭದ ನಂತರ ಈ ರಸ್ತೆ ಹೊಂಡ ಗುಂಡಿಗಳಿಂದ ವಾಹನ ಸಂಚಾರ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೇ ಕಂಪನಿ ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂಬ ಕಾರಣವೊಡ್ಡಿ ಕಂಪನಿ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿ ಕೆಲಸ ಸ್ಥಗಿತಗೊಳಿಸಿದ್ದರು. ಇದರಿಂದ ಕಾಮಗಾರಿ ನಿರ್ವಹಿಸಲು ಕಾರ್ಮಿಕರ ಕೊರತೆಯಿಂದ ಕಳೆದ ಕೆಲವು ದಿನಗಳಿಂದ ಕೆಲಸ ಸ್ಥಗಿತಗೊಂಡಿತ್ತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸಂಸದರಾದ ಬ್ರಿಜೇಶ್ ಚೌಟ  ಕೂಡ ಕಾಮಗಾರಿಯ ಬಗ್ಗೆ  ಅಸಾಮಾಧಾನ ಗೊಂಡಿದ್ದರಲ್ಲದೆ   ಅಧಿಕಾರಿಗಳಲ್ಲಿ  ಸರಿಯಾದ ಕ್ರಮ ಕೈಗೊಳ್ಳಲು ಒತ್ತಡ ಹಾಕಿದ್ದರು ಹಾಗೂ ಅಧಿಕಾರಿಗಳೂ ಕೂಡ ನಿಧಾನಗತಿ ಹಾಗೂ ಅಸಮರ್ಪಕ ಕೆಲಸದ ಬಗ್ಗೆ ಅಸಮಾಧಾನಗೊಂಡಿದ್ದರು .    ಈ ಎಲ್ಲ ಬೆಳವಣಿಗೆಯ ನಂತರ    ಅಧಿಕಾರಿಗಳು     ಡಿ.ಪಿ. ಜೈನ್ ಕಂಪನಿ ಕಾಮಗಾರಿಯನ್ನು ಮೊಗ್ರೋಡಿ ಕನ್ಸ್ ಸ್ಟ್ರಕ್ಸನ್ಸ್ ಅವರಿಗೆ  ಹಸ್ತಾಂತರಿಸುವ ಬಗ್ಗೆ ಮಾತುಕತೆ ನಡೆಸುತಿದ್ದಾರೆ  ಎಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಪುಂಜಾಲಕಟ್ಟೆಯಿಂದ ಬಿ.ಸಿ.ರೋಡ್ ವರೆಗಿನ ರಸ್ತೆ ಕಾಮಗಾರಿಯನ್ನು ಮೊಗ್ರೋಡಿ ಅವರು ನಿರ್ವಹಿಸಿದ್ದು ಮುಂದೆ ಈ ರಸ್ತೆ ಕಾಮಗಾರಿ ಕೂಡ ಅವರೇ ನಿರ್ವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆ.12ರಿಂದ ಮೊಗ್ರೋಡಿ ಕನ್ಸ್‌ಸ್ಟ್ರಕ್ಸನ್ಸ್ (MCK) ಅವರು ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಆರಂಭಿಸಲಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಏನೇ ಇರಲಿ ಸಂಚಾರಕ್ಕೆ ಯೋಗ್ಯವಾದ ರೀತಿ ರಸ್ತೆ ನಿರ್ಮಾಣವಾಗಲಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
error: Content is protected !!