
ಬೆಳ್ತಂಗಡಿ : ಪಶು ಆಸ್ಪತ್ರೆ ಶೆಡ್‌ನಲ್ಲಿ ಮಲಗಿದ ರೀತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿ ಕಳಸ ಸಮೀಪದ ಹಿರೆಬೈಲು ನಿವಾಸಿ ಸುಮಾರು 37 ವರ್ಷ ಪ್ರಾಯದ ರವಿ ಎಂದು ಗುರುತಿಸಲಾಗಿದೆ.

ಇವರು ಕಳೆದ ಹಲವು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತಿದ್ದು ಸಂತೆಕಟ್ಟೆ ಸೇರಿದಂತೆ ಪೇಟೆಯಲ್ಲಿ ರಾತ್ರಿ ಹೊತ್ತು ಮಲಗುತಿದ್ದರು. ವಿಪರೀತ ಕುಡಿತದ ಚಟ ಹೊಂದಿದ್ದ ಇವರು ಕಳೆದ ರಾತ್ರಿ ಪಶು ಆಸ್ಪತ್ರೆಯ ಪಶು ಆ್ಯಂಬುಲೆನ್ಸ್ ನಿಲ್ಲಿಸುವ ಶೆಡ್ಡಿನಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತ ವ್ಯಕ್ತಿಯ ಕೈಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಅಳವಡಿಸಲಾಗುವ ಐವಿ ಡ್ರಿಪ್ ಕಂಡು ಬಂದಿದೆ. ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೋ, ಅಥವ ವಿಷ ಸೇವಿಸಿ ಸಾವನ್ನಪ್ಪಿದ್ದಾರೋ ಎಂಬುದು ತನಿಖೆಯ ಬಳಿಕ ತಿಳಿದುಬರಬೇಕದೆ.