ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧತನಾಗಿರುವ ನಟ ದರ್ಶನ್ ಗ್ಯಾಂಗ್‍ನ ನಾಲ್ಕನೇ ಆರೋಪಿ ರಾಘವೇಂದ್ರ ಅವರ ತಾಯಿ ಇಂದು (ಜು.20) ನಿಧನರಾಗಿದ್ದಾರೆ.
ರಾಘವೇಂದ್ರ ಅಲಿಯಾಸ್ ರಘು ಅವರ ತಾಯಿ ಮಂಜುಳಮ್ಮ (75) ಮಾನಸಿಕ ಅಸ್ವಸ್ಥತೆ, ವಯೋಸಹಜ ಕಾಯಿಲೆಯಿಂದ ಕೋಳಿಬುರುಜನಹಟ್ಟಿ ಮನೆಯಲ್ಲಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.
ರಘು ಲವ್ ಮ್ಯಾರೇಜ್ ಆಗಿ ಪತ್ನಿ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದು ಆಗಾಗ್ಗೆ ತಾಯಿ ಆರೋಗ್ಯ ವಿಚಾರಿಸುತ್ತಿದ್ದ. ಇವರ ಸಹೋರ ಮುರುಳಿ ಅವರು ತಾಯಿಯನ್ನು ನೋಡಿಕೊಳ್ಳುತ್ತಿದ್ದರು.
ಮೃತಪಟ್ಟಿರುವ ತಾಯಿಯ ಅಂತ್ಯಸಂಸ್ಕಾರ ಇಂದು ನಡೆಯಲಿದ್ದು ಆರೋಪಿ ರಘು ಅವರನ್ನು ತಾಯಿಯ ಅಂತ್ಯಸಂಸ್ಕಾರಕ್ಕೆ ಕೊರೆದುಕೊಂಡು ಬರುವ ಸಾಧ್ಯತೆ ಇದೆಯೋ ಇನ್ನಷ್ಟೆ ತಿಳಿದು ಬರಬೇಕಿದೆ.