ಮುಂಡಾಜೆ, ರಸ್ತೆಯ ಮಧ್ಯೆ ಹೂತು ಹೋದ ಲಾರಿ: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರ ಆಕ್ರೋಶ:

 

 

ಬೆಳ್ತಂಗಡಿ : ಅವೈಜ್ಞಾನಿಕ ಕಾಮಗಾರಿಯಿಂದ ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆಯಲ್ಲಿ ಹಲವಾರು ಅಪಘಾತಗಳು ನಡೆಯುತ್ತಿದ್ದು. ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಅವೈಜ್ಙಾನಿಕ ಕಾಮಗಾರಿಯಿಂದಾಗಿ ವಾಹನ ಸವಾರರು, ಸಾರ್ವಜನಿಕರು ಸಂಚಾರ ಮಾಡದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯುದ್ದಕ್ಕೂ ಬೃಹತಕಾರದ ಹೊಂಡ ಗುಂಡಿಗಳಿಂದ ದೊಡ್ಡ ಅನಾಹುತಗಳೇ ಸಂಭವಿಸುತ್ತಿದೆ. ಮುಂಡಾಜೆ ಬಳಿಯ ಸೀಟ್ ಎಂಬಲ್ಲಿ ಲಾರಿಯೊಂದ ರಸ್ತೆ ನಡುವೆಯೇ ಹೂತು ಹೋಗಿ ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೀಟು ಕಾಡು ಎಂಬಲ್ಲಿ ಜು.19 ರಂದು ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಚಲಿಸುತ್ತಿದ್ದ ಲಾರಿ ರಸ್ತೆಯ ಮಧ್ಯ ಇರುವ ಹೊಂಡಕ್ಕೆ ಬಿದ್ದು ಅಲ್ಲೇ ಬಾಕಿಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಸ್ಥಳಕ್ಕೆ ತೆರಳಿ ಕಾಮಗಾರಿಯ ಇಂಜಿನಿಯರನ್ನು ತರಾಟೆಗೆ ತೆಗೆದುಕೊಂಡು ಲಾರಿಯನ್ನು ತಕ್ಷಣ ಕ್ರೇನ್ ಮೂಲಕ ಸ್ಥಳಾಂತರಿಸಲು ಸೂಚಿಸಿದ್ದಾರೆ.ಸ್ಥಳದಲ್ಲಿ
ಧರ್ಮಸ್ಥಳ ಸೇರಿದಂತೆ ಟ್ರಾಫಿಕ್ ಪೊಲೀಸರು ಇದ್ದು ವಾಹನ ಸಂಚಾರವನ್ನು ನಿರ್ವಹಿಸಿದ್ದಾರೆ.

error: Content is protected !!