ಶಿರಾಡಿ: ಭಾರೀ ಮಳೆಯ ಹಿನ್ನಲೆ ಜು.17ರ ಮಧ್ಯಾಹ್ನದಿಂದ ಶಿರಾಡಿ ಘಾಟ್ ಕುಸಿತ ಆರಂಭವಾಗಿದ್ದು ಮತ್ತಷ್ಟು ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ನಿರಂತರ ಮಳೆಗೆ ಭೂಕುಸಿತ ಸಂಭವಿಸುತ್ತಲೇ ಇದ್ದು ಈ ಹಿನ್ನಲೆ ಅವಘಡ ಆಗದಂತೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಶಿರಾಡಿಘಾಟ್‌ನ ದೊಡ್ಡತಪ್ಲು ಪ್ರದೇಶದಲ್ಲಿ ಭೂಕುಸಿತವಾಗ್ತಿರೋ ಕಾರಣ ರಸ್ತೆ ದುರಸ್ತಿ ಆಗುವವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಚಾರ್ಮಾಡಿ ಘಾಟ್ ಮೂಲಕ ಸಂಚರಿಸಲು ಸೂಚಿಸಲಾಗಿದೆ. ಹೀಗಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಳವಾಗಿದೆ.
ಇತ್ತೀಚೆಗೆ ಚಾರ್ಮಾಡಿ ಹೆದ್ದಾರಿ, ತಡೆಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಪ್ರಯಾಣ ಆತಂಕಕಾರಿಯಾಗಿದೆ. ಆದರೆ ಈಗ ಶಿರಾಡಿ ಘಾಟಿಯೂ ಸ್ಥಗಿತವಾಗಿದ್ದರಿಂದ ಅನಿವಾರ್ಯವಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲೇ ವಾಹನ ಸಂಚಾರ ಮಾಡಬೇಕಿದೆ. ಹೀಗಾಗಿ ಚಾರ್ಮಾಡಿ ಘಾಟಿಯಲ್ಲಿ ಬ್ಲಾಕ್ ಉಂಟಾಗುತ್ತಿದೆ.