ಬೆಳ್ತಂಗಡಿ : ಚರಂಡಿ ಕೆಲಸದಲ್ಲಿ ನಡೆದ ಲಕ್ಷಾಂತರ ರೂಪಾಯಿ ಅವ್ಯಹಾರ ಪ್ರಕರಣ ಸಂಬAಧ ಇಂದಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ಎರಡು ದಿನಗಳಿಂದ ಬೆಂಗಳೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2021-22 ರಲ್ಲಿ ಚರಂಡಿ ಕೆಲಸದಲ್ಲಿ 30 ಲಕ್ಷ ಹಣವನ್ನು ಅವ್ಯಹಾರ ನಡೆಸಲಾಗಿದೆ, ಚರಂಡಿ ಕೆಲಸವನ್ನು 20% ಕೂಡ ನಡೆಸಿಲ್ಲ ಎಂದು ಸ್ಥಳೀಯ ನಿವಾಸಿ ಜಯರಾಮ್ ಗೌಡ ಬಂಗಾಡಿ ಎಂಬವರು 2023 ಜೂನ್ ತಿಂಗಳಲ್ಲಿ ಪಿಡಿಓ ಆಗಿದ್ದ ಸವಿತಾ, ಗ್ರಾಮ ಪಂಚಾಯತ್ ಅಧ್ಯಕ್ಷ ಅಡಿಲು ಆನಂದ, ಇಂಜಿನಿಯರ್ ಹರ್ಷಿತ್ ವಿರುದ್ಧ ಬೆಂಗಳೂರು ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ಜು.9 ರಂದು ಬೆಳಗ್ಗೆ ಬೆಂಗಳೂರು ಲೋಕಾಯುಕ್ತ ಕೇಂದ್ರ ಕಚೇರಿಯ ಹಿರಿಯ ಉಪ ನಿರ್ದೇಶಕರು ತಾಂತ್ರಿಕ ವಿಭಾಗದ ಇಂಜಿನಿಯರ್ ಪ್ರಕಾಶ್ ಬಣಕಾರ್ ಮತ್ತು ಸಹಾಯಕ ಇಂಜಿನಿಯರ್ ತೇಜಶ್ರೀ ಮತ್ತು ಮಂಗಳೂರು ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳ ನೇತೃತ್ವದ ತಂಡ ಇಂದಬೆಟ್ಟು ಗ್ರಾಮ ಪಂಚಾಯತ್ ಗೆ ಆಗಮಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಜು.10 ರಂದು ಇಂದಬೆಟ್ಟು ಗ್ರಾಮ ಪಂಚಾಯತ್‌ಗೆ ಬಂದು ತನಿಖೆ ನಡೆಸಿ ದೂರುದಾರ ಜಯರಾಮ್ ಬಂಗಾಡಿ ಜೊತೆ ಚರಂಡಿ ಕೆಲಸಗಳನ್ನು ಪರಿಶೀಲನೆ ನಡೆಸಿ ಮಹಜರ್ ಮಾಡಿ ತೆರಳಿದ್ದಾರೆ.
ಈ ಹಿಂದೆ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಪಂಚಾಯತ್ ಮುಂದೆ ಪ್ರತಿಭಟನೆ ಕೂಡ ನಡೆಸಲಾಗಿತ್ತು.