ಎಸ್ ಎಸ್ ಎಲ್ ಸಿ ಗಣಿತ ಮರು ಪರೀಕ್ಷೆಯಲ್ಲಿ 5 ಅಂಕ ಹೆಚ್ಚು: ಶೆ.98.72 ಅಂಕ ಗಳಿಸಿದ ಉರುವಾಲು ಶ್ರೀ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿನಿ

 

ಬೆಳ್ತಂಗಡಿ: ಎಸ್ ಎಸ್ ಎಲ್ ಸಿ ಗಣಿತ ಮರು ಪರೀಕ್ಷೆ ಬರೆದ ಉರುವಾಲು ಶ್ರೀ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಜ್ಞಾ ಸಾಲಿಯಾನ್ 5 ಹೆಚ್ಚುವರಿ ಅಂಕ ಗಳಿಸಿ 625ಕ್ಕೆ ಒಟ್ಟು 617 (98.72%) ಅಂಕ ಪಡೆದಿದ್ದಾರೆ.

ಇಳಂತಿಲ ಗ್ರಾಮದ ಅಟಾಲು ನಿವಾಸಿ ಮನೋಹರ ಕುಮಾರ್ ಮತ್ತು ನಯನಾ ದಂಪತಿಗಳ ಪುತ್ರಿಯಾಗಿರುವ ಇವರು ಪ್ರಸ್ತುತ ಗುರುವಾಯನಕೆರೆಯ ಎಕ್ಸ್ ಎಲ್ ಪಿ ಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ.

error: Content is protected !!