ವ್ಯಕ್ತಿಯ ಹೊಟ್ಟೆ ಸೇರಿದ 25 ಪೈಸೆ ನಾಣ್ಯ: 20 ನಿಮಿಷಗಳಲ್ಲಿ ಹೊರತೆಗೆದ ವೈದ್ಯರು!

ವಾರಣಾಸಿ: 8 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನುಂಗಿದ್ದ 25 ಪೈಸೆಯ ನಾಣ್ಯವನ್ನು ಹೊರತೆಗೆಯುವಲ್ಲಿ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸರ್ ಸುಂದರ್‌ಲಾಲ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ನಾಣ್ಯವನ್ನು ಬಾಯಲ್ಲಿಟ್ಟುಕೊಂಡು ಮಲಗಿದ್ದಾಗ ಆಕಸ್ಮಿಕವಾಗಿ ಬಾಯಿಯಿಂದ ಜಾರಿ ಶ್ವಾಸನಾಳದಲ್ಲಿ ಸಿಲುಕಿಕೊಂಡಿತ್ತು. ಇದರಿಂದ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದ ಆ ವ್ಯಕ್ತಿ ಕೊನೆಗೆ ವಿಧಿಯಿಲ್ಲದೇ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯ ಕಾರ್ಡಿಯೋ ಥೋರಾಸಿಕ್ ಸರ್ಜನ್ ಪ್ರೊ.ಸಿದ್ಧಾರ್ಥ್ ಲಖೋಟಿಯಾ ಮತ್ತು ಪ್ರೊ.ಎಸ್.ಕೆ.ಮಾಥುರ್ ನೇತೃತ್ವದ ತಂಡ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ನಾಣ್ಯ ಹೊರತೆಗೆದಿದೆ. ಕೇವಲ 20 ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಿರುವುದು ಗಮನಾರ್ಹ.

ಈ ವ್ಯಕ್ತಿಯ ಹೊಟ್ಟೆಯಲ್ಲಿದ್ದ ನಾಣ್ಯವನ್ನು ಹೊರತೆಗೆಯಲು ಅಡ್ವಾನ್ಸ್ಡ್ ರಿಂಗಿಂಗ್ ಬ್ರೋಕಾ ಸ್ಕೋಪ್‌ನಂತಹ ಉತ್ತಮ ಗುಣಮಟ್ಟದ ತಂತ್ರಜ್ಞಾನವನ್ನು ಬಳಸಲಾಗಿದೆ. ಯಶಸ್ವಿ ಶಸ್ತ್ರಚಿಕಿತ್ಸೆ ಯಿಂದ ರೋಗಿ ಆರೋಗ್ಯವಾಗಿದ್ದಾರೆ.

error: Content is protected !!