ಆನ್ ಲೈನ್ ಆರ್ಡರ್ ಐಸ್‌ಕ್ರೀಂ ನಲ್ಲಿ ಸಿಕ್ಕ ಮಾನವನ ಬೆರಳು: ಪೊಲೀಸ್ ತನಿಖೆಯಲ್ಲಿ ನೈಜ ಘಟನೆ ಬೆಳಕಿಗೆ..?: ಫ್ಯಾಕ್ಟರಿಯಲ್ಲಿ ಸಿಬ್ಬಂದಿಗಳ ಕೈಬೆರಳಿಗೆ ಕತ್ತರಿ?!

ಪುಣೆ: ಆನ್ ಲೈನ್ ಮೂಲಕ ಆರ್ಡರ್ ಮಾಡಿದ್ದ ‘ಯಮ್ಮೊ’ ಐಸ್‌ಕ್ರೀಂ ಕಂಪನಿಯ ಐಸ್‌ಕ್ರೀಂ ನಲ್ಲಿ ಮಾನವನ ಬೆರಳು ಸಿಕ್ಕ ಘಟನೆ ಮುಂಬೈನಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ  ಪೊಲೀಸರು ತನಿಖೆ ನಡೆಸಿದ್ದು ಇದೀಗ ಈ ಬೆರಳು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯ ಬೆರಳು ಎಂದು ತಿಳಿದು ಬಂದಿದೆ.

ಕೆಲ ದಿನಗಳ ಹಿಂದೆ ಇಲ್ಲಿ ಕೆಲಸ ಮಾಡುವವರ ಕೈಬೆರಳು ಕತ್ತರಿಸಿದ್ದ ವಿಚಾರ ಬೆಳಕಿಗೆ ಬಂದಿದ್ದು, ಕತ್ತರಿಸಿದ ಬೆರಳು ಆ ನೌಕರನದ್ದೇ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಹೀಗಾಗಿ ವ್ಯಕ್ತಿಯ ಡಿಎನ್‌ಎ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಶೀಘ್ರದಲ್ಲೇ ನೈಜ ವಿಚಾರ ಬೆಳಕಿಗೆ ಬರಲಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಸದ್ಯ ಈ ಐಸ್‌ಕ್ರೀಂ ಪೂರೈಕೆಯಾದ ಘಟಕದಲ್ಲಿ ಉತ್ಪಾದನೆಯನ್ನು ನಿಲ್ಲಿಸಲಾಗಿದೆ.

error: Content is protected !!