ಶಾಲಾ ಆವರಣದೊಳಗಿದೆ ಅಪಾಯಕಾರಿ ಮರ: ಶಾಲಾ ಮಕ್ಕಳಿಗೆ ಅಪಾಯ ತಾರದಿರಲಿ ಒಣ ಮರ: ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ಗ್ರಾಮ ಪಂಚಾಯತ್:

 

 

ಬೆಳ್ತಂಗಡಿ: ಶಾಲಾ ಅವರಣದ ಒಳಗೊಂದು ಒಣಗಿದ ಮರ ಅಪಾಯವನ್ನು ತಂದೊಡ್ಡುವ ರೀತಿಯಲ್ಲಿ ಇದೆ.ನಗರಕ್ಕೆ ತಾಗಿಕೊಂಡಿರುವ ಲಾಯಿಲ ಗ್ರಾಮ ಪಂಚಾಯತ್ ಪಕ್ಕದಲ್ಲೆ ಇರುವ ಕರ್ನೋಡಿ ಶಾಲೆಯ ಅವರಣದ ಒಳಗೆ ಅಂಗನವಾಡಿ ಕಟ್ಟಡಕ್ಕೆ ತಾಗಿಕೊಂಡು ಮರವೊಂದು ಒಣಗಿದ್ದು  ಅಪಾಯಕಾರಿ ರೀತಿಯಲ್ಲಿ ಇದೆ.  ಅದರ ಅಡಿಯಲ್ಲೇ ಚಿಕ್ಕ ಪುಟ್ಟ ಮಕ್ಕಳು ಆಟವಾಡುತ್ತ ಆಚೀಚೆ ನಡೆದಾಡುತ್ತ ಸಾಗಬೇಕಾಗಿದೆ. ಅದಲ್ಲದೇ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಒಂದು ವೇಳೆ ಗಾಳಿಗೆ ಶಾಲಾ ಸಮಯದಲ್ಲಿ ಮರ ಅಥವಾ ಗೆಲ್ಲು ಮುರಿದು ಬಿದ್ದರೆ ದೊಡ್ಡ ಅನಾಹುತ ಸಂಭವಿಸುವ ಅಪಾಯವೂ ಇದೆ. ಅದ್ದರಿಂದ ಸಂಬಂಧ ಪಟ್ಟ ಶಾಲಾಭಿವೃದ್ಧಿ ಸಮಿತಿ ಅಥವಾ ಗ್ತಾಮ ಪಂಚಾಯತ್  ತಕ್ಷಣ ಈ ಒಣ ಮರವನ್ನು ತೆರವುಗೊಳಿಸಲು‌ ಕ್ರಮ ಕೈಗೊಂಡು ಸಂಭಾವ್ಯ ಅಪಾಯವನ್ನು ತಪ್ಪಿಸಬೇಕಾಗಿದೆ.

error: Content is protected !!