ಮೈಸೂರು: ಹುಲಿ ಸಂರಕ್ಷಿತ ಪ್ರದೇಶದಲ್ಲಿ 5ವರ್ಷದ ಗಂಡು ಹುಲಿ ಸಾವನ್ನಪ್ಪಿರುವ ಘಟನೆ ನಾಗರಹೊಳೆಯಲ್ಲಿ ಸಂಭವಿಸಿದೆ.
ಹುಣಸೂರು ವನ್ಯಜೀವಿ ವಲಯದ ಲಕ್ಷೀಪುರ ಕಳ್ಳಬೇಟೆ ತಡೆ ಶಿಬಿರದ ಗೋವಿಂದೇ ಗೌಡ ಕಂಡಿ ಅರಣ್ಯ ಪ್ರದೇಶದಲ್ಲಿ ಇಲಾಖೆಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಹುಲಿ ಕಳೇಬರ ಪತ್ತೆಯಾಗಿದೆ.
ಸ್ಥಳಕ್ಕೆ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಳಿಕ ಮರಣೋತ್ತರ ಪರೀಕ್ಷೆ ಮಾಡಿ ಸ್ಥಳದಲ್ಲೇ ಕಳೇಬರವನ್ನು ಸುಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಅವರು, “ಮೇಲ್ನೋಟಕ್ಕೆ ಕಾದಾಟದಲ್ಲಿ ಒಂದೆರಡು ದಿನಗಳ ಹಿಂದೆ ಹುಲಿ ಮೃತಪಟ್ಟಿರುವ ಶಂಕೆ ಇದೆ” ಎಂದಿದ್ದಾರೆ.