ಬೆಂಗಳೂರು: ಖ್ಯಾತ ಕನ್ನಡ ಸಿನಿಮಾ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದು, ಪ್ರಕರಣದ ತನಿಖೆ ಮುಂದುವರಿಯುತ್ತಿದೆ. ಈ ಮಧ್ಯೆ 10 ವರ್ಷಗಳ ಹಿಂದಿನ ಮತ್ತೊಂದು ಘಟನೆ ಈಗ ಚರ್ಚೆಗೆ ಬಂದಿದೆ.
ನಟ ದರ್ಶನ್ ಬಂಧನವಾದ ಬಗ್ಗೆ ಮಾತನಾಡುವ ಜನರು, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎಂದು ಹೇಳುತ್ತಿದ್ದಾರೆ. ಆದರೂ ಒಳಗೊಳಗೆ ದರ್ಶನ್ ಹೀಗೆ ಮಾಡಬಾರದಿತ್ತು ಎಂದು ಬೇಸರಪಟ್ಟುಕೊಳ್ಳುತ್ತಿದ್ದಾರೆ. ಸಿನಿಮಾದ ನಟನೆಯಲ್ಲಿ ಕೆಲಸದಾಳುಗಳ ಮುಂದೆ ಒಳ್ಳೆಯವನಾಗಿದ್ದ ದರ್ಶನ್ ರಿಯಲ್ ಲೈಫ್ ನಲ್ಲಿ ತನ್ನ ಫಾರ್ಮ್ ಹೌಸ್ ನೋಡಿಕೊಳ್ಳುತ್ತಿದ್ದ ಆಳುಗಳ ಜೊತೆ ಹೇಗಿದ್ರು ಗೊತ್ತಾ? ಆ ಒಂದು ನೈಜ ಘಟನೆ ಈಗ ಹೊರಬಿದ್ದಿದೆ.
ನಟ ದರ್ಶನ್ ವಿಕೃತಿಯ ಪರಮಾವಧಿ ಎಂಥದ್ದು ಎನ್ನುವುದಕ್ಕೆ ಇದೊಂದು ಸಾಕ್ಷಿ ಅಂತಾನೆ ಹೇಳ್ಬೋದು. ಟೀ.ನರಸೀಪುರದ ದರ್ಶನ್ ಒಡೆತನದ ಫಾರ್ಮ್ ಹೌಸ್‍ನಲ್ಲಿ 10 ವರ್ಷಗಳ ಹಿಂದೆ ನಡೆದ ಘಟನೆ ಇದು. ದರ್ಶನ್ ತಮ್ಮ ಫಾರ್ಮ್‍ಹೌಸ್‍ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ. ಹೀಗಾಗಿ ಒಂದಷ್ಟು ಸಿಬ್ಬಂದಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಚಾಮರಾಜನಗರ ಜಿಲ್ಲೆಯ ನಿಜಲಿಂಗಪುರದ ಮೂಲದವರು ಮಹೇಶ್ ಎಂಬವರಿಗೆ ಒಮ್ಮೆ ದರ್ಶನ್ ಸಾಕಿರುವ ಎತ್ತು ತಲೆಗೆ ತಿವಿದಿತ್ತು. ಎತ್ತಿನ ಕೊಂಬು ಮಹೇಶ್ ಕಣ್ಣಿಗೆ ಚುಚ್ಚಿ ತಲೆಯಿಂದ ಹೊರಬಂದಿತ್ತು. ಆತನನ್ನು ಆಸ್ಪತ್ರೆಗೆ ಸಾಗಿಸಿದ್ದ ದರ್ಶನ್ ಆಪ್ತರು ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಹೋಗಿದ್ದರು. ಘಟನೆಯಲ್ಲಿ ಮಹೇಶ್ ಕಣ್ಣು ಕಳೆದುಕೊಂಡು ಕಳೆದ 10 ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ.
ಬಡತನ ಇದ್ದಿದ್ದರಿಂದ ತಮ್ಮ ದನಿಗಳ ಮುಂದೆ ಪರಿಹಾರ ಕೇಳಲು ಮಹೇಶ್ ಕುಟುಂಬ ಮುಂದಾಗಿತ್ತು. ಈ ವಿಚಾರ ತಿಳಿದು ಮಹೇಶ್ ಕುಟುಂಬಸ್ಥರನ್ನು ಮೈಸೂರಿನ ಹೋಟೆಲ್‍ಗೆ, ವಿಷಯ ಯಾರಿಗಾದರೂ ಹೇಳಿದರೆ ಅಷ್ಟೇ ಎಂದು ದರ್ಶನ್ ಹಾಗೂ ಗ್ಯಾಂಗ್ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಬಳಿಕ ಪರಿಹಾರ ಕೇಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೋದಾಗ ಮಹೇಶ್ ತಾಯಿಯ ಮೇಲೆ ನಾಯಿಗಳನ್ನು ಛೂಬಿಟ್ಟು ಓಡಿಸಿದ್ದರು ಎಂದು ಹೇಳಲಾಗಿದೆ.
ನಟ ದರ್ಶನ್ ಕೊಲೆ ಪ್ರಕರಣ ಆರೋಪಿಯಾದ ಬೆನ್ನಲ್ಲೆ ಒಂದೊಂದೆ ಘಟನೆಗಳು ಹೊರ ಬೀಳುತ್ತಿದೆ.