ಮೋರಿಯಲ್ಲಿದ್ದ ಶವವನ್ನು ಎಳೆದಾಡಿದ್ದ ನಾಯಿಗಳು..!: ಗಸ್ತು ಸಂದರ್ಭದಲ್ಲಿ ಮೃತದೇಹ ನೋಡಿದ್ದ ಸೆಕ್ಯೂರಿಟಿ ಗಾರ್ಡ್: ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ..

 

ಬೆಂಗಳೂರು : ಸ್ಯಾಂಡಲ್ ವುಡ್ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆ ಕೊಲೆಯ ಸಾಕಷ್ಟು ವಿಚಾರಗಳು ಬೆಳಕಿಗೆ ಬರುತ್ತಿದೆ.

ಮೃತ ರೇಣುಕಾಸ್ವಾಮಿ 

ಹತ್ಯೆಯಾದ ವ್ಯಕ್ತಿ ನಟಿಯೊಬ್ಬರಿಗೆ ಅಶ್ಲೀಲ ಕಮೆಂಟ್‍ಗಳನ್ನು ಮಾಡುತ್ತಿದ್ದ ಎಂಬ ಪ್ರಾಥಮಿಕ ಮಾಹಿತಿ ದೊರೆತ್ತಿದ್ದು ಇದರ ಹೆಚ್ಚಿನ ವಿಚಾರಣೆ ಮುಂದುವರಿದು ನಟ ದರ್ಶನ್ ಬಂಧನವಾಗಿದ್ದಾರೆ.

ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಶವವನ್ನು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಮೋರಿಗೆ ಎಸೆಯಲಾಗಿತ್ತು. ಈ ಶವವನ್ನ ನಾಯಿಗಳು ಎಳೆದಾಡಿವೆ. ಜೂ.9 ರಂದು ಸುಮ್ಮನಹಳ್ಳಿಯಲ್ಲಿ ಅಪಾರ್ಟ್‍ಮೆಂಟ್‍ವೊಂದರ ಸೆಕ್ಯೂರಿಟಿ ಗಾರ್ಡ್ ಗಸ್ತು ಮಾಡುವ ವೇಳೆ ಮೋರಿ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಬಿದ್ದಿರುವುದು ಕಂಡು ಬಂದಿತ್ತು. ಮೃತದೇಹದ ಮೇಲೆ ಗಾಯದ ಗುರುತುಗಳಿದ್ದವು. ಈ ಕುರಿತು ಇವರೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೊಲೆ ಪ್ರಕರಣ ಸಂಬಂಧ ಬಂಧನಕ್ಕೊಳಗಾದವರು ದರ್ಶನ್ ಸೂಚನೆ ಮೇಲೆ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!