ಕಾಶ್ಮೀರ: ಹಿಂದೂ ಯಾತ್ರಾರ್ಥಿಗಳ ಮೇಲೆ ಭಯೋತ್ಪಾದಕರಿಂದ ದಾಳಿ: ಸತ್ತಂತೆ ನಟಿಸಿ ಬದುಕುಳಿದ ಯಾತ್ರಿಗಳು: 20 ನಿಮಿಷಗಳ ಭಯಾನಕ ಘಟನೆಯನ್ನು ವಿವರಿಸಿದ ಯಾತ್ರಿಕ

ರಿಯಾಸಿ : ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಹಿಂದೂ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಸತ್ತಂತೆ ನಟಿಸಿ ಬದುಕುಳಿದ ಹಿಂದೂ ಯಾತ್ರಿಗಳು 20 ನಿಮಿಷಗಳ ಭಯಾನಕ ಘಟನೆಯನ್ನು ವಿವರಿಸಿದ್ದಾರೆ.

ಶಿವ ಖೋರಿಯಿಂದ ಯಾತ್ರಾರ್ಥಿಗಳು ಬರುತ್ತಿದ್ದ ಸಂದರ್ಭದಲ್ಲಿ 6ರಿಂದ 7 ಭಯೋತ್ಪಾದಕರು ಬಸ್ ಹಿಂದೆ – ಮುಂದೆ ಚಲಿಸದಂತೆ ರಸ್ತೆಯ ಎಲ್ಲಾ ಬದಿಗಳಿಂದ ಮುಚ್ಚಿ, ಬಳಿಕ ಗುಂಡು ಹಾರಿಸಲು ಆರಂಭಿಸಿದ್ದಾರೆ. ಬಸ್ ಚಾಲಕನಿಗೆ ಗುಂಡು ತಗುಲಿದ ಕಾರಣ ನಿಯಂತ್ರಣ ಕಳೆದುಕೊಂಡು ಬಸ್ ಕಮರಿಗೆ ಬಿದ್ದಿದೆ. ಈ ವೇಳೆ ಎಲ್ಲಾ ಯಾತ್ರಾರ್ಥಿಗಳು ಜೋರಾಗಿ ಕಿರುಚಿದ್ದಾರೆ. ಆದರೂ ಬಿಡದ ಭಯೋತ್ಪಾದಕರು ನಿರಂತರವಾಗಿ ಗುಂಡು ಹಾರಿಸುತ್ತಿದ್ದರು. ಗಾಯಗೊಂಡು ಬದುಕುಳಿದ ಯಾತ್ರಾರ್ಥಿಗಳು ಬಸ್ಸಿನ ಮೇಲೆ ಗುಂಡು ಹಾರುತ್ತಿದ್ದರೂ ಮೌನವಾಗಿಯೇ ಇದ್ದು ಭಯೋತ್ಪಾದಕರ ಮುಂದೆ ಸತ್ತಂತೆ ನಟಿಸಿ ಬಚಾವ್ ಆಗಿದ್ದಾರೆ. ದಾಳಿ ನಡೆದ 10 ರಿಂದ 15 ನಿಮಿಷಗಳ ನಂತರ ಪೊಲೀಸರು ಮತ್ತು ಸ್ಥಳೀಯರು ನಮ್ಮನ್ನು ರಕ್ಷಿಸಲು ಬಂದರು ಎಂದು ಯಾತ್ರಿಕರೊಬ್ಬರು ಹೇಳಿದ್ದಾರೆ.

error: Content is protected !!