ಶಾಸಕ ಹರೀಶ್ ಪೂಂಜ, ವಿಚಾರಣೆ, ನೋಟಿಸ್ ನೀಡದಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ..!.:

 

 

ಬೆಳ್ತಂಗಡಿ: ಸುಳ್ಳು ಕೇಸ್ ದಾಖಲಿಸಿ ಉದ್ದೇಶಪೂರ್ವಕವಾಗಿ ದ.ಕ. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ   ಶಶಿರಾಜ್ ಶೆಟ್ಟಿಯವರ ಬಂಧನ ನಡೆದಿದೆ. ಆತ ಅಮಾಯಕ ಎಂದು   ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ   ಶಾಸಕ ಹರೀಶ್ ಪೂಂಜಾ ಸೇರಿದಂತೆ ಬಿಜೆಪಿ ಕಾರ್ಯಕರ್ತರು   ಪ್ರತಿಭಟನೆ ನಡೆಸಿದ್ದು . ಈ ವೇಳೆ ನಡೆದ ಘಟನೆಗಳ  ಬಗ್ಗೆ   ಅವರ ಮೇಲೆ  ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ   ಮೊಕದ್ದಮೆ ವಿಚಾರವಾಗಿ ಜೂ07 ರಂದು  ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್  ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ  ಶಾಸಕ  ಹರೀಶ್ ಪೂಂಜ ಅವರನ್ನು ಮುಂದಿನ ವಿಚಾರಣಾ ದಿನಾಂಕದವರೆಗೆ   ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ನೋಟಿಸ್  ನೀಡುವುದು, ಧ್ವನಿ ಮಾದರಿ  ನೀಡಲು  ಠಾಣೆಗೆ ಬರುವಂತೆ ಒತ್ತಾಯಿಸುವುದು ಮಾಡಬಾರದಾಗಿ      ಕರ್ನಾಟಕದ ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಪ್ರಕರಣದಲ್ಲಿ ಹರೀಶ್ ಪೂಂಜಾ ಅವರ ಪರವಾಗಿ ವಕೀಲ ಪ್ರಭುಲಿಂಗ ನಾವಡಗಿ ,ಪ್ರಸನ್ನ ದೇಶಪಾಂಡೆ ಅವರು ವಾದವನ್ನು ಮಂಡಿಸಿದರು.

 

 

error: Content is protected !!