ಕೊಯ್ಯೂರು: ತಡರಾತ್ರಿ ಕೊಟ್ಟಿಗೆಗೆ ನುಗ್ಗಿದ ಚಿರತೆ: ಒಂದು ಆಡು ಸಾವು, ಮತ್ತೊಂದು ಆಡು ಚಿರತೆ ಪಾಲು!

ಬೆಳ್ತಂಗಡಿ : ಕೊಟ್ಟಿಗೆಗೆ ನುಗ್ಗಿದ ಚಿರತೆ ಆಡುಗಳ ಮೇಲೆ ದಾಳಿ ನಡೆಸಿ ಒಂದು ಆಡು ಸಾವನ್ನಪ್ಪಿದ ಘಟನೆ ಕೊಯ್ಯೂರು ಗ್ರಾಮದ ಮದರಸ ಬಳಿಯ ಮೊಹಮ್ಮದ್ ಎಂಬವರ ಮನೆಯಲ್ಲಿ ಜೂ.05ರ ರಾತ್ರಿ ಸಂಭವಿಸಿದೆ.

4 ಆಡುಗಳನ್ನು ಕಟ್ಟಿಹಾಕಿದ್ದ ಕೊಟ್ಟಿಗೆಗೆ ನಿನ್ನೆ ರಾತ್ರಿ ಚಿರತೆ ನುಗ್ಗಿ ಒಂದು ಆಡನ್ನು ಕೊಂದು, ಮತ್ತೊಂದು ಆಡನ್ನು ಹೊತ್ತೊಯ್ದಿದೆ. ಇದೇ ಸಂದರ್ಭದಲ್ಲಿ ಇನ್ನೊಂದು ಆಡು ತೀವ್ರ ಗಾಯಗೊಂಡಿದೆ.

error: Content is protected !!