ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಜೇಶ್ ಚೌಟ ಗೆಲುವು: ದ.ಕ ಜಿಲ್ಲೆಯಾದ್ಯಂತ ಸಂಭ್ರಮ: ಬೆಳ್ತಂಗಡಿಯಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ

ದ.ಕ: ಲೋಕಸಭಾ ಚುನಾವಣೆ 2024ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾಗಿ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಜೇಶ್ ಚೌಟ ಜಯಗಳಿದ್ದು ಜಿಲ್ಲೆಯಾದ್ಯಂತ ಸಂಭ್ರಮ ಆಚರಿಸಿದ್ದಾರೆ.

ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿಯಿರುವ ಬಿಜೆಪಿ ಕಚೇರಿ ಮುಂಭಾಗದಲ್ಲಿ ಜೂ.04ರಂದು ಕಾರ್ಯಕರ್ತರು ಪಟಾಕಿ ಸಿಡಿಸಿ, ಜಯ ಘೋಷ ಕೂಗಿ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸಿದ್ದಾರೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ ಹಾಗೂ ಜಯಾನಂದ ಗೌಡ, ಪಕ್ಷದ ಪ್ರಮುಖರಾದ ಕೊರಗಪ್ಪ ನಾಯ್ಕ್, ವಸಂತಿ ಮಚ್ಚಿನ, ರಾಜೇಶ್ ಪೆರ್ಬುಂಡ, ಗಿರೀಶ್ ಡೋಂಗ್ರೆ ಲಾಯ್ಲ, ಕೊರಗಪ್ಪ ಗೌಡ ಚಾರ್ಮಾಡಿ ಸಹಿತ ಪಕ್ಷದ ನೂರಾರು ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗಿಯಾಗಿದ್ದಾರೆ.

error: Content is protected !!