ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನ : ನಾಳೆ ದೃಢಕಲಶಾಭಿಷೇಕ ಹಾಗೂ ಚಂಡಿಕಾಯಾಗ:

 

 

 

ಬೆಳ್ತಂಗಡಿ: ಪಡಂಗಡಿ ಗ್ರಾಮದ ಇತಿಹಾಸ ಪ್ರಸಿದ್ಧ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ ಮೇ 30ರಂದು ದೃಢಕಲಶಾಭಿಷೇಕ ಹಾಗೂ ಚಂಡಿಕಾಯಾಗವು ಉದಯ ಪಾಂಗಾಣ್ಣಯರ ನೇತೃತ್ವದಲ್ಲಿ ವಿವಿಧ ವೈಧಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇಂದು ಸಂಜೆ 5 ರಿಂದ ರಾಕ್ಷೋಘ್ನ ಹೋಮ‌ ವಾಸ್ತು ಹೋಮ ನಾಳೆ ಗುರುವಾರ ಕಲಶಾಧಿವಾಸ,ಅಧಿವಾಸ ಹೋಮ, ಚಂಡಿಕಾ ಯಾಗ ನಡೆಯಲಿದೆ.

ಎ 08 ರಿಂದ 17 ರವರೆಗೆ ಶ್ರೀ ಕ್ಷೇತ್ರದಲ್ಲಿ ಶಶಿಧರ್ ಶೆಟ್ಟಿ ಬರೋಡಾ ಇವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ಮಾದರಿ ಬ್ರಹ್ಮಕಲಶೋತ್ಸವ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

error: Content is protected !!