ಶಿಬಾಜೆ: ಮೀಸಲು ಅರಣ್ಯ ಪ್ರದೇಶದ ಒಳಗೆ ಕಾಡು ಪ್ರಾಣಿಗಳ ಬೇಟೆ: ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಮೂವರ ಬಂಧನ

ಉಪ್ಪಿನಂಗಡಿ : ಮೀಸಲು ಅರಣ್ಯ ಪ್ರದೇಶದ ಒಳಗೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸಿದ ಮೂವರನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿರುವ ಘಟನೆ ಶಿಬಾಜೆಯಲ್ಲಿ ನಡೆದಿದೆ.

ಶಿಬಾಜೆ ಗ್ರಾಮದ ಪೆರ್ಲ-ಕಲ್ಲಾಜೆ ರಸ್ತೆಯ ಪತ್ತಿಮಾರ್ ಎಂಬಲ್ಲಿ ಶಿರಾಡಿ-ಶಿಶಿಲ ಮೀಸಲು ಅರಣ್ಯ-4 ರಲ್ಲಿ ಮೇ.23 ಬೆಳಗ್ಗಿನ ಜಾವ ಎರಡು ಗಂಟೆ ವೇಳೆಗೆ ಕಾಡು ಪ್ರಾಣಿ ಬೇಟೆಯಾಡಲು ಯತ್ನಿಸುತ್ತಿದ್ದ ಶಿಬಾಜೆಯ ಕುರುಂಬು ನಿವಾಸಿ ಹರೀಶ್(44), ಸಕಲೇಶಪುರದ ಕೌಡಳ್ಳಿಯ ಶಿವಕುಮಾರ್(33), ಶಿಬಾಜೆಯ ಪತ್ತಿಮಾರ್ ನ ಪದ್ಮನಾಭ(53) ಅವರನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯವರು ಬಂಧಿಸಿದ್ದು ಬಂಧಿತರಿಂ 1-ಎಸ್‌ಬಿಬಿಎಲ್ ಕೋವಿ ಮತ್ತು ಒಂದು ಮಾರುತಿ ಓಮ್ನಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಚರಣೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ನೇತೃತ್ವದ ಸಿಬ್ಬಂದಿ ಉಪ ವಲಯ ಅರಣ್ಯಾಧಿಕಾರಿ ರಾಜೇಶ್ , ಅವಿನಾಶ್, ಶಿವಕುಮಾರ್ ಹೊಸ್ಮನಿ, ರವೀಂದ್ರ, ಬಿಟ್ ಫಾರೆಸ್ಟ್ ನಿಂಗಪ್ಪ ಅವರಿ, ಚಾಲಕ ಕಿಶೋರ್ ಭಾಗವಹಿಸಿದರು.

error: Content is protected !!