ಬೆಳ್ತಂಗಡಿ: ಒಂದೇ ರಾತ್ರಿ 2 ಮನೆಯಲ್ಲಿ ಕಳ್ಳತನ: 24 ಪವನ್ ಚಿನ್ನ ಕದ್ದು ಕಳ್ಳರು ಪರಾರಿ: ವೇಣೂರು ಠಾಣಾ ಪೊಲೀಸರಿಂದ ತನಿಖೆ

ಬೆಳ್ತಂಗಡಿ: ಮಧ್ಯರಾತ್ರಿ ಎರಡು ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿರುವ ಮೇ.22 ರಂದು ತೆಂಕಕಾರಂದೂರು ಪಲ್ಕೆ ಎಂಬಲ್ಲಿ ನಡೆದಿದೆ.

ಪಲ್ಕೆ ನಿವಾಸಿ ಪ್ರೇಮ ಶೆಟ್ಟಿ ಎಂಬವರು ತಮ್ಮ ಮಗ, ವೃದ್ಧೆ ತಾಯಿ ಜೊತೆ ವಾಸವಿದ್ದು, ನಿನ್ನೆ ತಡರಾತ್ರಿ ಕಳ್ಳರು ಮನೆಯ ಹಿಂಬದಿ ಬಾಗಿಲು ಒಡೆದು ಮನೆಯೊಳಗೆ ಬಂದು ರೂಮ್‌ನಲ್ಲಿರುವ ಕಪಾಟು ಒಡೆದು ಸುಮಾರು 20 ಪವನ್ ಚಿನ್ನ ಹಾಗು ಇತರೆ ದಾಖಲೆಗಳ ಬ್ಯಾಗನ್ನೇ ಎಗರಿಸಿ ಪರಾರಿಯಾಗಿದ್ದಾರೆ. ಕಪಾಟಿನ ಸಮೀಪವೇ ಮನೆಮಂದಿ ಮಲಗಿದ್ದರೂ ಕಳ್ಳರು ಚಾಣಾಕ್ಷತನದಿಂದ ಕದ್ದಿದ್ದು, ಮನೆಮಂದಿಗೆ ಎಚ್ಚರವಾಗಿರಲಿಲ್ಲ.

ಪ್ರೇಮಾ ಅವರ ಮನೆಯಿಂದ ಚಿನ್ನಾಭರಣ ಎಗರಿಸಿದ ನಂತರ ಅವರ ಮನೆಯಿಂದ 200 ಮೀಟರ್ ದೂರದಲ್ಲಿರುವ ಕರಂಬಾರು ಗ್ರಾಮದ ಮುಂಡೆಲ್ ವಿಶ್ವನಾಥ ಶೆಟ್ಟಿಯವರ ಮನೆಗೂ ಕನ್ನ ಹಾಕಿ ಕಳ್ಳತನ ನಡೆಸಿದ್ದಾರೆ. ಆ ಮನೆಯವರುಸಂಬಂಧಿಕರ ಮನೆಯಲ್ಲಿ ದೈವದ ಕೋಲ ಇರುವ ಕಾರಣ ಸಂಜೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯ ಬಾಗಿಲು ಒಡೆದು 4 ಪವನ್ ಚಿನ್ನ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ವೇಣೂರು ಠಾಣೆ ಉಪನಿರೀಕ್ಷಕ ಶ್ರೀಶೈಲ ಅವರ ತಂಡ ಆಗಮಿಸಿ ತನಿಖೆ ನಡೆಸುತ್ತಿದೆ.

error: Content is protected !!