‘ರಾಜಕೀಯದಲ್ಲಿ ವಸಂತ ಬಂಗೇರ ಅಪರೂಪದ ರಾಜಕಾರಣಿ: ಮಂತ್ರಿಯಾಗಲು ಲಾಭಿ ಮಾಡಿದವರಲ್ಲ: ಬಡವರ ಧ್ವನಿಯಾಗಿದ್ದವರು’: ಬೆಳ್ತಂಗಡಿ ಕೆ.ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರರ ಹೆಸರು: ಸಿಎಂ ಸಿದ್ದರಾಮಯ್ಯ

ಬೆಳ್ತಂಗಡಿ: ಮಾಜಿ ಶಾಸಕ ದಿ.ಕೆ. ವಸಂತ ಬಂಗೇರ ಅವರ ಉತ್ತರಕ್ರಿಯೆ ಇಂದು (ಮೇ.21) ನಡೆದಿದ್ದು, ಗುರುವಾಯನಕೆರೆ ಮಂಜಿಬೆಟ್ಟು ಎಫ್.ಎಮ್ ಗಾರ್ಡನ್ ಸಭಾಸಭವನದಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಿಎಂ ಅವರು ವಸಂತ ಬಂಗೇರರ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು. ‘1983ರಲ್ಲಿ ನಾನು ಮತ್ತು ಕೆ. ವಸಂತ ಬಂಗೇರರು ಒಟ್ಟಿಗೆ ವಿಧಾನ ಸಭೆಗೆ ಪ್ರವೇಶ ಮಾಡಿದವರು. ಅವರು ಬಿಜೆಪಿಯಿಂದ ಗೆದ್ದು ಶಾಸಕನಾಗಿದ್ದರು. ಬಡವರ ಪರವಾಗಿದ್ದ ಅವರು ಬಡವರ ಏನೇ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಯಾವ ಹಂತಕ್ಕಾದ್ರೂ ಹೋಗಲು ಸಿದ್ಧರಿದ್ದರು, ಯಾರ ಜೊತೆ ಮಾತನಾಡುತ್ತಿದ್ದೇನೆ ಎಂಬುದಕ್ಕಿಂತ ಬಡವರ ಸಮಸ್ಯೆಯ ಪರಿಹಾರವೇ ಅವರಿಗೆ ಮುಖ್ಯವಾಗಿತ್ತು. ಮಾನವೀಯತೆಯಿಂದ ಬದುಕನ್ನು ಸಾರ್ಥಕ ಮಾಡಿಕೊಂಡ ವ್ಯಕ್ತಿ ಅವರು. ರಾಜಕೀಯದಲ್ಲಿ ಅವರು ಅಪರೂಪದ ರಾಜಕಾರಣಿ. ಯಾವ ಸಂದರ್ಭದಲ್ಲೂ ಸತ್ಯ ಹೇಳಲು ಹಿಂಜರಿಯುತ್ತಿರಲಿಲ್ಲ. ಸತ್ಯವನ್ನು ನೇರವಾಗಿ ಹೇಳುತ್ತಿದ್ದರು. ನಾನು ಮೆಚ್ಚಿಕೊಂಡ ಶಾಸಕರಲ್ಲಿ ಅವರೂ ಒಬ್ಬರು ಎಂದರು.

ಶಾಸಕನಾಗಿದ್ದಾಗ ಮಂತ್ರಿಯಾಗಲು ಎಂದೂ ಲಾಭಿ ಮಾಡಿದವರಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರೆ ಅವರು ಈ ಬಾರಿ ಮಂತ್ರಿಯಾಗುತ್ತಿದ್ದರು. ಇಷ್ಟು ಬೇಗ ನಮ್ಮನ್ನು ಅಗಲಿ ಹೊರಡುತ್ತಾರೆ ಅಂದುಕೊAಡಿರಲಿಲ್ಲ. ಅತ್ಯಂತ ದುಃಖದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ನಮ್ಮಿಬ್ಬರದ್ದು ಧೀರ್ಘಕಾಲದ ಸ್ನೇಹ. ನಾನೀಗ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬಸ್ಥರಿಗೆ , ಅಭಿಮಾನಿಗಳಿಗೆ ದುಃಖವನ್ನು ತಡೆಯುವ ಶಕ್ತಿ ದೇವರು ಕೊಡಲಿ ಎಂದರು.


ವಸAತ ಬಂಗೇರ ಅವರ ಅಭಿಮಾನಿಗಳು ನೀಡಿದ ಮನವಿಗೆ ಸ್ಪಂದಿಸಿದ ಅವರು ‘ಕೆ.ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ, ವೃತ್ತಕ್ಕೆ ವಸಂತ ಬಂಗೇರರ ಹೆಸರಿಡಲಾಗುತ್ತದೆ, ಜೊತೆಗೆ ಅವರ ಪ್ರತಿಮೆ ನಿರ್ಮಿಸಲಾಗುತ್ತದೆ. ಇದೆಲ್ಲವನ್ನು ಸರಕಾರದ ವತಿಯಿಂದ ಮಾಡಿಕೊಡಲಾಗುವುದು ಎಂದರು.

error: Content is protected !!