ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನ: ನಾಳೆ ಬೆಳ್ತಂಗಡಿ ಯುವ ಮೋರ್ಚಾ ವತಿಯಿಂದ ಬೃಹತ್‌ ಪ್ರತಿಭಟನೆ;

 

ಬೆಳ್ತಂಗಡಿ; ಮೇಲಂತಬೆಟ್ಟು ಸಮೀಪ ಅಕ್ರಮ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ತಹಶೀಲ್ದಾರ್ ಹಾಗೂ ಬೆಳ್ತಂಗಡಿ ಪೊಲೀಸರ ತಂಡ ಶನಿವಾರ ದಾಳಿ ನಡೆಸಿ  ಉದ್ಧೇಶಪೂರ್ವಕವಾಗಿ ಸುಳ್ಳು ಕೇಸ್ ದಾಖಲಿಸಿ ಬೆಳ್ತಂಗಡಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ಏಕಾಏಕಿ ಶನಿವಾರ ಮಧ್ಯರಾತ್ರಿ ಮನೆಯಿಂದ ಬಂಧಿಸಿರುವುದರ ವಿರುದ್ಧ ಮೇ 20 ಸೋಮವಾರ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಸಂತೆಕಟ್ಟೆಯಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆಯಲ್ಲಿ ಸಾಗಿ ಮಿನಿ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಯಲಿದೆ. ಎಂದು ತಿಳಿದು ಬೆಳ್ತಂಗಡಿ ಬಿಜೆಪಿ ಮಂಡಲ  ತಿಳಿಸಿದೆ.

error: Content is protected !!