ಬೆಳ್ತಂಗಡಿ: ಮಾಜಿ ಶಾಸಕ ದಿ| ವಸಂತ ಬಂಗೇರರಿಗೆ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ, ಧರ್ಮಸ್ಥಳ ಗ್ರಾಮ ಸಮಿತಿಯಿಂದ ನುಡಿನಮನ

ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ, ಧರ್ಮಸ್ಥಳ ಗ್ರಾಮ ಸಮಿತಿಯಿಂದ ದಿ|ಬಂಗೇರರಿಗೆ ಇಂದು ಸಂಜೆ ಲಕ್ಷಣ ಪೂಜಾರಿ ಮಲ್ಲರ್ ಮಾಡಿ, ಧರ್ಮಸ್ಥಳ ಇವರ ಮನೆಯಲ್ಲಿ ನುಡಿನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಪಂಚಾಯತ್ ಅಧ್ಯಕ್ಷರಾದ ವಿಮಲ ಪರಮೇಶ್ವರ್, ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷರಾದ ಎಂ.ಕೆ ಪ್ರಸಾದ್, ಕೃಷಿ ಪತ್ತಿನ ಸಹಕಾರಿ ಸಂಘ ಧರ್ಮಸ್ಥಳ ಇದರ ಅಧ್ಯಕ್ಷರಾದ ಪ್ರೀತಮ್ ಡಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದೇಶಕರಾದ ಗುರುರಾಜ್ ಗುರಿಪಲ್ಲ, ಸುನಿಲ್ ಕನ್ಯಾಡಿ, ಗ್ರಾಮ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ, ಎಸ್,ಎನ್.ಡಿ ಪಿ ಸಂಘದ ಉಪಾಧ್ಯಕ್ಷರಾದ ಸಚಿನ್ ಇಂಚರ ವೇದಿಕೆಯಲ್ಲಿ ಉಪಸ್ಥಿತರಿದ್ದರು.. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದೇಶಕರಾದ ರೂಪೇಶ್ ಧರ್ಮಸ್ಥಳ ಪ್ರಸ್ತಾವಿಕ ಭಾಷಣ ಮೂಲಕ ಸ್ವಾಗತಿಸಿದರು.. ಮಾಜಿ ನಿರ್ದೇಶಕರಾದ ಪುರುಷೋತ್ತಮ ಪೂಜಾರಿ, ಅರುಣ್ ಬೊಳಿಯಾರ್, ಧರ್ಮಸ್ಥಳ ಪಂಚಾಯತ್ ಸದಸ್ಯರಾದ ಹರೀಶ್ ಕನ್ಯಾಡಿ, ಎಸ್,ಎನ್.ಡಿ ಪಿ ಸಂಘದ ಕಾರ್ಯದರ್ಶಿ ಸ್ಮಿತೇಶ್, ಎಸ್,ಎನ್.ಡಿ ಪಿ ಸಂಘದ ಪದಾಧಿಕಾರಿಗಳು, ಸೂರ್ಯಪ್ರಕಾಶ್ ಕನ್ಯಾಡಿ , ಲಕ್ಷ್ಮಣ ಪೂಜಾರಿ, ಜತ್ತಪ್ಪ ಸುವರ್ಣ, ನಾಣ್ಯಪ್ಪ ಪೂಜಾರಿ, ಶ್ರೀಧರ್ ಪೂಜಾರಿ, ಪ್ರಭಾಕರ್ ಸ್ಟುಡಿಯೋ, ಸದಾಶಿವ ಕಾಮದೇನು, ವಸಂತ ಸುವರ್ಣ ವೆಂಕಪ್ಪ ಪೂಜಾರಿ , ಮಾಧವ, ದಿನೇಶ್, ಪುರುಷೋತ್ತಮ ಮೊದಲಾದ ಪ್ರಮುಖರು , ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಧರ್ಮಸ್ಥಳ ಹೆಚ್ಚಿನ ಎಲ್ಲಾ ಪದಾಧಿಕಾರಿಗಳು, ಬಿಲ್ಲವ ಬಂಧುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಧರ್ಮಸ್ಥಳ ಗ್ರಾಮದ ಎಲ್ಲಾ ಬಿಲ್ಲವ ಬಾಂಧವರಿಗೆ ದಿ.ಬಂಗೇರರ ಉತ್ತರಕ್ರಿಯೆ ಆಮಂತ್ರಣ ನೀಡಲಾಯಿತು.

error: Content is protected !!