ಹಲಸಿನ ಹಣ್ಣು ತಿನ್ನಲು ಪ್ರಯತ್ನಿಸುವಾಗ ವಿದ್ಯುತ್ ಪ್ರವಹಿಸಿ ಕಾಡಾನೆ ಸಾವು :ಕೆರೆಹಕ್ಲು ಎಸ್ಟೇಟ್‌ನಲ್ಲಿ ಆನೆಯ ಮೃಹದೇಹ ಪತ್ತೆ: ಸತ್ತಿದ್ದು ಮೂವರನ್ನು ಬಲಿ ಪಡೆದಿದ್ದ ನರಹಂತಕ ಆನೆಯಾ?

ಚಿಕ್ಕಮಗಳೂರು : ಒಂಟಿ ಸಲಗವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಆಲ್ದೂರು ಸಮೀಪದ ಕಂಚಿನಕಲ್ಲು ದುರ್ಗದ ಖಾಸಗಿ ಕಾಫಿತೋಟದಲ್ಲಿ ಸಂಭವಿಸಿದೆ.

ಕೆರೆಹಕ್ಲು ಎಸ್ಟೇಟ್‌ನಲ್ಲಿ ಆನೆಯ ಮೃಹದೇಹ ಪತ್ತೆಯಾಗಿದ್ದು ಆನೆ ಸಾವನ್ನಪ್ಪಿರುವ ಜಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು, ಅಲ್ಲೇ ಹಲಸಿನ ಮರದ ಕೊಂಬೆಗಳು ಮುರಿದು ಬಿದ್ದಿದೆ.
ಆನೆ ಹಲಸಿನ ಹಣ್ಣು ತಿನ್ನುವ ಪ್ರಯತ್ನದ ವೇಳೆ ವಿದ್ಯುತ್ ತಂತಿಗೆ ದೇಹ ತಾಗಿ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ.

ಮೂವರನ್ನು ಬಲಿ ಪಡೆದಿದ್ದ ಆನೆ..!

ಇತ್ತೀಚೆಗೆ ಈ ಭಾಗದಲ್ಲಿ ಕಾಡಾನೆ ದಾಳಿಯಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಆನಂದ ಪೂಜಾರಿ ಎಂಬುವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಅಲ್ಲದೆ ಕಾರ್ಮಿಕರೊಬ್ಬರನ್ನು ತುಳಿದು ಸಾಯಿಸಿತ್ತು. ಜೊತೆಗೆ ಆಲ್ದೂರು ಸಮೀಪ ಕಾರ್ಮಿಕ ಮಹಿಳೆಯೋರ್ವರನ್ನು ತುಳಿದು ಸಾಯಿಸಿತ್ತು. ಮನುಷ್ಯರ ಮೇಲೆ ದಾಳಿ ಮಾಡಿ ಸಾಯಿಸುತ್ತಿದ್ದ ನರಹಂತಕ ಆನೆಯೇ ಈಗ ಮೃತಪಟ್ಟಿರಬಹುದಾ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ಸ್ಥಳಕ್ಕೆ ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!