ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ 17 ವಿಮಾನಗಳು ಚೆನ್ನೈನತ್ತ ಡೈವರ್ಟ್!: ಕೆಂಪೇಗೌಡ ವಿಮಾನ ನಿಲ್ದಾಣದ ಸುತ್ತ ಭಾರೀ ಮಳೆ: ಟರ್ಮಿನಲ್ 2ರ ಛಾವಣಿಯಲ್ಲಿ ಮಳೆ ನೀರು ಸೋರಿಕೆ: ಪ್ರಯಾಣಿಕರು ಗರಂ

ದೇವನಹಳ್ಳಿ: ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮೇ.09ರಂದು ಸುರಿದ ಭಾರಿ ಮಳೆಯಿಂದ ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಚೆನ್ನೈನತ್ತ ಸಾಗಿದೆ.

ರಾತ್ರಿ 9.35 ರಿಂದ 10.29ರ ನಡುವೆ ಗುಡುಗು ಮಿಂಚು ಸಹಿತ ಸುರಿದ ಭಾರಿ ಮಳೆಯಿಂದ ವಿಮಾನಗಳನ್ನು ಲ್ಯಾಂಡಿಗ್ ಮಾಡಲು ಸಾಧ್ಯವಾಗದೆ ಮಾರ್ಗ ಬದಲಾವಣೆ ಮಾಡಬೇಕಾಯಿತು. ಹೀಗಾಗಿ ಗುರುವಾರ 13 ದೇಶೀಯ ವಿಮಾನಗಳು, ಮೂರು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಮತ್ತು ಒಂದು ಅಂತರಾಷ್ಟ್ರೀಯ ಸರಕು ವಿಮಾನ ಒಟ್ಟು 17 ವಿಮಾನಗಳನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.

ವಿಮಾನ ನಿಲ್ದಾಣದ ಟರ್ಮಿನಲ್ 2ರ ಛಾವಣಿಯಲ್ಲಿ ಮಳೆ ನೀರು ಸೋರಿಕೆಯಾಗಿದ್ದು, ಮಳೆ ನೀರು ನೆಲದ ಮೇಲೆ ನಿಂತಿರುವುದನ್ನು ಕಂಡ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ದೂರುಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕೆಐಎ ಅಧಿಕಾರಿಗಳು, ‘ಗುರುವಾರ ರಾತ್ರಿ ಅಲ್ಪ ಅವಧಿಯಲ್ಲಿ ಅಧಿಕ ಮಳೆ ಸುರಿದಿದೆ. ಪರಿಣಾಮ ಛಾವಣಿಯಲ್ಲಿ ಮಳೆ ನೀರು ಸೋರಿಕೆಯಾಗಿದೆ. ಪ್ರಯಾಣಿಕರಿಗೆ ಆದ ತೊಂದರೆಗಳಿಗೆ ನಾವು ವಿಷಾಧಿಸುತ್ತೇವೆ” ಎಂದಿದ್ದಾರೆ

error: Content is protected !!