‘ಲಸಿಕೆ ಬಳಿಕ ಸಾವಿರಾರು ಮಹಿಳೆಯರ ಋತುಚಕ್ರದಲ್ಲಿ ಅಡ್ಡ ಪರಿಣಾಮ: ಎಲ್ಲಾ ಕೋವಿಡ್ ಲಸಿಕೆಗಳ ಹಿಂದಿನ ವೈಜ್ಞಾನಿಕತೆಯನ್ನು ಪರಿಶೀಲಿಸಿ’: ತೀವ್ರ ಕಳವಳ ವ್ಯಕ್ತಪಡಿಸಿದ ಭಾರತೀಯ ವೈದ್ಯರ ಗುಂಪು

ಹೊಸದಿಲ್ಲಿ: ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಇದೆ ಎಂದು ಆಸ್ಟಾçಜೆನೆಕಾ ಕಂಪನಿ ಒಪ್ಪಿಕೊಂಡ ಬಳಿಕ ಲಸಿಕೆ ಪಡೆದುಕೊಂಡವರು ಆತಂಕದಲ್ಲಿದ್ದು ಇದೀಗ ಭಾರತೀಯ ವೈದ್ಯರ ಗುಂಪು ಕೂಡ ತೀವ್ರ ಕಳವಳ ವ್ಯಕ್ತಪಡಿಸಿದೆ.

‘ಅವೇಕನ್ ಇಂಡಿಯಾ ಮೂವ್‌ಮೆಂಟ್ʼ (ಎಐಎಂ) ಬ್ಯಾನರ್‌ನಡಿಯಲ್ಲಿ ಒಗ್ಗೂಡಿರುವ ವೈದ್ಯರು, ಎಲ್ಲಾ ಕೋವಿಡ್ ಲಸಿಕೆಗಳ ಹಿಂದಿನ ವೈಜ್ಞಾನಿಕತೆಯನ್ನು ಪರಿಶೀಲಿಸಲು, ಅವುಗಳ ವಾಣಿಜ್ಯೀಕರಣದ ಪ್ರಮಾಣವನ್ನು ಲೆಕ್ಕ ಹಾಕಲು, ಜೊತೆಗೆ ಲಸಿಕೆಯ ಅಡ್ಡ ಪರಿಣಾಮಗಳ ಮೇಲೆ ನಿಗಾ ಇಡಲು ಸಕ್ರಿಯ ಕಣ್ಗಾವಲು ಮತ್ತು ಮೇಲ್ವಿಚಾರಣೆ ಕಾರ್ಯವಿಧಾನ ರೂಢಿಸಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಕಿರಣಶಾಸ್ತ್ರಜ್ಞ ಮತ್ತು ತರುಣ್ ಕೊಠಾರಿ ಅವರು “ಸರ್ಕಾರವು ಕೋವಿಡ್ ಲಸಿಕೆ ನೀಡುವಿಕೆಯ ನಂತರದ ದುರಂತ ಸಾವಿನ ಪ್ರಕರಣಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ವೈಜ್ಞಾನಿಕ ತನಿಖೆ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಮೂಲ ಪರಿಶೀಲಿಸದೆ ಕೋವಿಡ್ ಲಸಿಕೆಗಳನ್ನು ‘ಸುರಕ್ಷಿತ ಮತ್ತು ಪರಿಣಾಮಕಾರಿʼ ಎಂದು ಪ್ರಚಾರ ಮಾಡುವುದನ್ನು ಮುಂದುವರೆಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೋವಿಡ್-19 ಲಸಿಕೆಗಳ ತಯಾರಕರು ಅಲ್ಪಾವಧಿಯ ಅಥವಾ ದೀರ್ಘಾವಧಿಯ ಅಡ್ಡಪರಿಣಾಮಗಳು ಅಥವಾ ಸಾವುಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಡೇಟಾವನ್ನು ಹೊಂದಿರದೆ ಲಸಿಕೆ ನೀಡಲು ಪ್ರಾರಂಭಿಸಿದ್ದರು. ಲಸಿಕೆ ಬಳಿಕ ಸಾವಿರಾರು ಮಹಿಳೆಯರು ತಮ್ಮ ಋತುಚಕ್ರದಲ್ಲಿ ಅಸಹಜತೆಗಳನ್ನು ವರದಿ ಮಾಡಿದ್ದಾರೆ. ಇದು ಸೆಪ್ಟೆಂಬರ್ 2022ರಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಸ್ತ್ರೀರೋಗ ತಜ್ಞೆ ಮತ್ತು ಆಂಕೊಲಾಜಿಸ್ಟ್ ಡಾ ಸುಜಾತಾ ಮಿತ್ತಲ್ ಹೇಳಿದ್ದಾರೆ.

‘ಅವೇಕನ್ ಇಂಡಿಯಾ ಮೂವ್‌ಮೆಂಟ್’ (ಎಐಎಂ) ಭಾರತದಲ್ಲಿ ಕೋವಿಡ್ ಲಸಿಕೆ ಸಾವಿನ ವಿವರಗಳನ್ನು ಸಂಗ್ರಹಿಸುತ್ತಿದೆ. ಲಸಿಕೆ ಪ್ರಾರಂಭವಾದ 2021ರಿಂದ ದೇಶದ ವಿವಿಧ ಉನ್ನತ ಅಧಿಕಾರಿಗಳಿಂದ ಈ ಮಾಹಿತಿಯನ್ನು ಪಡೆಯುತ್ತಿದೆ. ಸರ್ಕಾರ ನಮಗೆ ಪ್ರತಿಕ್ರಿಯಿಸಲು ವಿಫಲವಾಗಿದೆ” ಎಂದು ಡಾ. ಕೊಥಾರಿ ಹೇಳಿದರು.

ಲಸಿಕೆ ಅಡ್ಡ ಪರಿಣಾಮ ಘಟನೆಗಳನ್ನು ಸಾಧ್ಯವಾದಷ್ಟು ಬೇಗ ಗುರುತಿಸಲು ಸಕ್ರಿಯ ಕಣ್ಗಾವಲು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಅಳವಡಿಸಬೇಕು. ಆರಂಭಿಕ ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ರೂಪಿಸಬೇಕು ಮತ್ತು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಇದರಿಂದ ಜೀವಗಳನ್ನು ಉಳಿಸಬಹುದು ಎಂದು ಅವರು ಹೇಳಿದರು.

error: Content is protected !!