ಕಾದ ನೆಲಕ್ಕೆ ಮಳೆಯ ಸಿಂಚನ: ಮತ್ತಷ್ಟು ಹೆಚ್ಚಾಯ್ತು ಸಿಲಿಕಾನ್ ಸಿಟಿಯ ಬಿಸಿ: ಮನೆ, ಬೈಕ್, ಕಾರು ಎಲ್ಲೆಲ್ಲೂ ಹಾವು..!

ಬೆಂಗಳೂರು: ಉರಿಬಿಸಿಲಿಗೆ ಕೊಂಚ ಮೈಯೊಡ್ಡಿದ್ದರೂ ಅಬ್ಬಾ ಬಿಸಿ ಎಂದು ಜನ ಮನೆಯೊಳಗೆ ಓಡಿಹೋಗುತ್ತಾರೆ. ಈ ಮಧ್ಯೆ ಪ್ರಾಣಿ, ಪಕ್ಷಿ, ಸರಿಸೃಪಗಳು ಸಂಕಷ್ಟ ಅನುಭವಿಸುತ್ತಿದೆ.

ಬೆಂಗಳೂರಿನಲ್ಲಿ 2 ದಿನ ಮಳೆಯ ಸಿಂಚನವಾಗಿ ಆ ಕ್ಷಣಕ್ಕೆ ಪ್ರಕೃತಿ ತಂಪಾಗಿದೆ. ಆದರೆ ಮರುದಿನದಿಂದ ಬಿಸಿಲ ತಾಪ ಹೆಚ್ಚಾಗಿ ಅವಿತ್ತಿದ್ದ ಎಲ್ಲಾ ಹಾವುಗಳು ಸೆಕೆ ತಾಳಲಾರದೆ ಮನೆ, ಬೈಕ್, ಕಾರುಗಳಲ್ಲಿ ಆಶ್ರಯ ಪಡೆಯಲು ಮುಂದಾಗಿದೆ. ಇಂದು ಒಂದೇ ದಿನ ಬೆಂಗಳೂರಿನ ಹಲವು ಕಡೆ ಬರೋಬ್ಬರಿ 12 ಹಾವುಗಳನ್ನು ರಕ್ಷಿಸಲಾಗಿದೆ.


ತುಮಕೂರಿನ ವರಂಗಲ್ ಫೌಂಡೇಶನ್ ವನ್ಯಜೀವಿ ಜಾಗೃತದಿಂದ ಉರಗ ಸಂರಕ್ಷಕ ದಿಲೀಪ್ ಅವರು ಇಂದು 12 ಹಾವುಗಳನ್ನು ರಕ್ಷಿಸಿದ್ದಾರೆ. ಈ ಮೂಲಕ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

error: Content is protected !!