ಬೆಳ್ತಂಗಡಿ: ತಾಲೂಕಿನ ನಗರ ಭಾಗದಲ್ಲಿರುವ ಸೋಮಾವತಿ ನದಿಯಲ್ಲಿ ನೀರಿನ ಕೊರತೆಯಿಂದ ಮೀನುಗಳು ಸಾವನ್ನಪ್ಪಿದೆ.
ವಿಪರೀತ ತಾಪಮಾನದಿಂದ ಹೆಚ್ಚಿನ ನೀರು ಬತ್ತಿಹೋಗಿದ್ದು, ಉಳಿದ ನೀರು ಬಿಸಿಯಾಗಿ ಜಲಚರಗಳು , ಮೀನುಗಳು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿವೆ.
ನದಿಗೆ ಬಲೆ ಬೀಸಿದ್ದರಿಂದ ನದಿ ನೀರು ಕೆಸರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಇದರಿಂದ ಇನ್ನು ಮುಂದೆ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಬೆಳ್ತಂಗಡಿ ನಗರಕ್ಕೆ ಇದೇ ಸೋಮಾವತಿ ನದಿ ಜೀವನದಿಯಾಗಿದ್ದು ಸದ್ಯ ನೀರು ಬತ್ತಿ ಹೋಗಿರುವುದರಿಂದ ಜನರಿಗೆ ನೀರು ಲಭ್ಯವಾಗುವ ಸಾಧ್ಯತೆ ಕಡಿಮೆ ಇದೆ. ಅಲ್ಲದೆ .ನೀರು ಕೊಳಕಾಗಿರುವುದರಿಂದ ಬಳಸಲು ಅನುಪಯುಕ್ತವಾಗಿದೆ.